ವಿಜಯಪುರ: ರಾಜ್ಯದಲ್ಲಿ ಸಾವರ್ಕರ್ ಪರ-ವಿರೋಧ ವಾದ ತಾರಕಕ್ಕೇರುತ್ತಿದೆ. ಈ ಮಧ್ಯೆ ವಿಜಯಪುರದ ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ಫೋಟೋ ರಾರಾಜಿಸಿದೆ.
ವಿಜಯಪುರದ ಜಲನಗರದಲ್ಲಿರುವ ಕಚೇರಿ ಗೋಡೆಗಳ ಮೇಲೆ ಸಾವರ್ಕರ್ ಭಾವಚಿತ್ರ ಪ್ರತ್ಯಕ್ಷವಾಗಿದೆ. ರಾತ್ರೋರಾತ್ರಿ ಸಾವರ್ಕರ್ ಫೋಟೋ ಪ್ರತ್ಯಕ್ಷವಾಗಿದ್ದು, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ್ ನೇತೃತ್ವದಲ್ಲಿ ಕೃತ್ಯ ನಡೆಸಲಾಗಿದೆ ಎಂಬ ಆರೋಪವಿದೆ. ಈ ವಿವಾದ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆಯನ್ನು ಅರಿತ ಪೊಲೀಸರು ಫೋಟೋಗಳನ್ನು ತೆರವುಗೊಳಿಸಿದ್ದಾರೆ.
PublicNext
22/08/2022 09:02 am