ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಅರಣ್ಯ ಸಿಬ್ಬಂದಿಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ ಸುರೇಶ್ ಗೌಡ !

ಮಂಡ್ಯ: ರೈತರನ್ನ ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಅರಣ್ಯ ಸಿಬ್ಬಂದಿಯನ್ನ ನಾಗಮಂಗಲದ ಶಾಸಕ ಸುರೇಶ್ ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಯನ್ನ ನಿಂದಿಸಿದ ಘಟನೆ ನಾಗಮಂಗಲ ತಾಲೂಕಿನ ಹಾಲತಿ ಗ್ರಾಮದಲ್ಲಿ ನಡೆದಿದ್ದು,ಜಮೀನು ವಿಚಾರವಾಗಿಯೇ ರೈತರು ಮತ್ತು ಅರಣ್ಯ ಇಲಾಖೆ ಮಧ್ಯ ವಾಗ್ವಾದ ನಡೆದಿದೆ.

ರೈತು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಈ ವೇಳೆನೆ ರೈತರನ್ನ ಬೆದರಿಸಲು ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಈ ಸಮಯದಲ್ಲಿಯೇ ಇಲ್ಲಿಗೆ ಬಂದಿದ್ದ ಶಾಸಕ ಸುರೇಶ್ ಗೌಡ, ಅರಣ್ಯ ಸಿಬ್ಬಂದಿಯನ್ನ ಅವಾಚ್ಯಶಬ್ದಗಳಿಂದಲೇ ನಿಂದಿಸಿದ್ದಾರೆ.

ಜಮೀನು ವಿವಾದ: ಸರ್ವೆ ನಂಬರ್ 135 ರಲ್ಲಿ ಅರಣ್ಯ ಇಲಾಖೆ ನೆಡುತೋಪು ಬೆಳೆಸಿತ್ತು.ಇದೇ ಜಮೀನಿಗಾಗಿಯೇ ರೈತರು ಬಗರ್ ಹುಕ್ಕುಂ ಸಾಗುವಳಿ ಅರ್ಜಿ ಸಲ್ಲಿಸಿದ್ದರು. ಜಮೀನು ವಶಪಡಿಸಿಕೊಳ್ಳಲು ಬಂದ ಅರಣ್ಯ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಆಗಲೇ ವಾಗ್ವಾದ ಏರ್ಪಟ್ಟು ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.

Edited By :
PublicNext

PublicNext

05/08/2022 09:55 pm

Cinque Terre

129.18 K

Cinque Terre

12