ಸೀತಾಪುರ: ಧಾರ್ಮಿಕ ಅವಹೇಳನ ಆರೋಪ ಎದುರಿಸುತ್ತಿರುವ ಅಲ್ಟ್ ನ್ಯೂಸ್ ಸಹಸಂಸ್ಥಾಪಕ ಹಾಗೂ ಪತ್ರಕರ್ತ ಮೊಹಮ್ಮದ್ ಜುಬೈರ್‌ನನ್ನು ಉತ್ತರ ಪ್ರದೇಶದ ಸೀತಾಪುರ ನ್ಯಾಯಾಲಯ 14 ದಿನಗಳವರೆಗೆ ನ್ಯಾಯಾಂಗ ವಶಕ್ಕೆ ನೀಡಿದೆ.
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಕುರಿತಾಗಿ ಮಾತನಾಡಿದ ವಿಡಿಯೋ ಹಂಚಿಕೊಂಡಿದ್ದ ಮೊಹಮ್ಮದ್ ಜುಬೈರ್ ಧಾರ್ಮಿಕ ನಿಂದನೆ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೊಲೀಸರು ಜುಬೈರ್‌ನನ್ನು ವಶಕ್ಕೆ ಪಡೆದಿದ್ದರು.
PublicNext
07/07/2022 10:35 pm