ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಬಿಜೆಪಿ ನಾಯಕ ಜಾಧವ್ ಹುಟ್ಟುಹಬ್ಬದ ವೇಳೆ ಗಲಾಟೆ: ಯುವಕರಿಬ್ಬರಿಗೆ ಚಾಕು ಇರಿತ

ದಾವಣಗೆರೆ: ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹುಟ್ಟುಹಬ್ಬದ ವೇಳೆ ಯುವಕರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಇಬ್ಬರಿಗೆ ಚಾಕು ಇರಿದ ಘಟನೆ ನಗರದ ಹೊಂಡದ ವೃತ್ತದಲ್ಲಿ ನಡೆದಿದೆ.

ಹಳೆಯ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಗುಂಪುಗಳ ನಡುವೆ ಈ ಹಿಂದೆ ಗಲಾಟೆ ನಡೆದಿತ್ತು. ನಿಟುವಳ್ಳಿಯ ಮೋಹನ್ ಹಾಗೂ ವೀರೇಶ್ ಚಾಕು ಇರಿತಕ್ಕೆ ಒಳಗಾದ ಯುವಕರು ಎಂದು ಗುರುತಿಸಲಾಗಿದೆ. ಮೂವರು ಯುವಕರು ಚಾಕುವಿನಿಂದ ಇರಿದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಬಿಜೆಪಿ ಮುಖಂಡ ಯಶವಂತ್ ರಾವ್ ಜಾಧವ್ ಜನ್ಮದಿನದ ಶುಭಾರೈಸಲು ಹೊಂಡ ಸರ್ಕಲ್ ಬಳಿ ತೆರಳಿದ್ದ ನಿಟುವಳ್ಳಿ, ಕೆಟಿಜೆ ನಗರದ ಯುವಕರ ಪೈಕಿ ಇಬ್ಬರ ಮೇಲೆ ದಾಳಿ ಮಾಡಿ, ಹಲ್ಲೆ ನಡೆಸಲಾಗಿದೆ. ಬಳಿಕ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ. ಈ ವೇಳೆ ವೀರ ಮದಕರಿ ನಾಯಕ ವೃತ್ತದಲ್ಲಿ ಬುಧವಾರ ರಾತ್ರಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಘಟನೆಯಲ್ಲಿ ಯುವಕನೊಬ್ನ ಗಾಯಗೊಂಡ ವಿಚಾರ ತಿಳಿದ ಯಶವಂತ ರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಇತರರು ಎರಡೂ ಗುಂಪಿನವರನ್ನು ಸಮಾಧಾನಪಡಿಸಿ ಗಾಯಾಳುವಿಗೆ ಆಸ್ಪತ್ರೆಗೆ ಕಳಿಸಲು ವ್ಯವಸ್ಥೆ ಮಾಡಿದ್ದಾರೆ. ಚಾಕು ಇರಿತ ವಿಚಾರ ತಿಳಿದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಹಾಗೂ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಕೃತ್ಯಕ್ಕೆ ಬಳಸಿದ್ದ ಚಾಕು ಅಯುಧ ಜಪ್ತಿ ಮಾಡಿ, ಹಲ್ಲೆ ಮಾಡಿದವರಿಗೆ ಶೋಧ ನಡೆಸಿದ್ದಾರೆ. ಚಾಕು ಇರಿತದಿಂದ ಗಾಯಗೊಂಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

30/06/2022 11:52 am

Cinque Terre

56.77 K

Cinque Terre

1

ಸಂಬಂಧಿತ ಸುದ್ದಿ