ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರುಂಡ ಕತ್ತರಿಸುವ ಕಾನೂನು ಮುಸ್ಲಿಂ ದೊರೆಗಳು ಮಾಡಿದ್ದು: ಕೇರಳ ರಾಜ್ಯಪಾಲ ಆರಿಫ್

ತಿರುವನಂತಪುರಂ: ರುಂಡ ಕತ್ತರಿಸುವ ಕಾನೂನನ್ನು ಹಿಂದೆ ಮುಸ್ಲಿಂ ದೊರೆಗಳು ರೂಪಿಸಿದ್ದರು. ಮದರಸಾಗಳಲ್ಲಿ ಮಕ್ಕಳಿಗೆ ಇದನ್ನೇ ಹೇಳಿಕೊಡಲಾಗುತ್ತಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮದರಸಾಗಳ ನಡೆ ಬಗ್ಗೆ ಆಕ್ರೋಶಿತರಾಗಿದ್ದಾರೆ.

ರಾಜಾಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ರುಂಡ ಕತ್ತರಿಸಿದ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಕೊಲೆಗೈದ ಮೂಲಭೂತವಾದಿ ರಕ್ಕಸರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಉದಯಪುರದಂತಹ ಘಟನೆಗಳಿಗೆ ಮದರಸಾ ಶಿಕ್ಷಣವೇ ಕಾರಣ. ಇಂತಹ ಶಿಕ್ಷಣ ಮಕ್ಕಳಿಗೆ ಅಗತ್ಯವಿಲ್ಲ. ಮುಸ್ಲಿಂ ಲಾ(ಮುಸ್ಲಿಂ ಕಾನೂನು), ಖುರಾನ್‌ನಲ್ಲಿಯೂ ರುಂಡ ಕತ್ತರಿಸಬೇಕೆಂಬ ಕಾನೂನು ಇಲ್ಲ. ಇದು ಮುಸ್ಲಿಂ ದೊರೆಗಳು ಮಾಡಿದ ಕಾನೂನು. ಆಗ ಮುಸ್ಲಿಂ ಧರ್ಮಕ್ಕೆ ವಿರುದ್ಧವಾಗಿ ನಡೆದರೆ ರುಂಡ ಕತ್ತರಿಸುವ ಅಧಿಕಾರ ಇತ್ತು. ಇದೇ ಕಾನೂನನ್ನು ಮದರಸಾಗಳಲ್ಲಿ ಬೋಧಿಸಲಾಗುತ್ತದೆ ಎಂದು ಮದರಸಾ ಶಿಕ್ಷಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Nagaraj Tulugeri
PublicNext

PublicNext

30/06/2022 08:20 am

Cinque Terre

71.73 K

Cinque Terre

22

ಸಂಬಂಧಿತ ಸುದ್ದಿ