ನೂಪುರ್ ಶರ್ಮಾ ಬೆಂಬಲಿಗನ ಭೀಕರ ಕೊಲೆ; ನಾಳೆ ಹಿಂದು ಸಂಘಟನೆಗಳಿಂದ ದೇಶಾದ್ಯಂತ ಅಭಿಯಾನ.
ಧಾರವಾಡ: ಮುಸ್ಲಿಂ ಮೂಲಭೂತವಾದಿಗಳು ಮಾಡಿದ ಕನ್ಹಯ್ಯ ಲಾಲ್ ಕೊಲೆ ಪ್ರಕರಣವನ್ನು ಖಂಡಿಸಿ ಇಂದು ದೇಶಾದ್ಯಂತ ಹಿಂದು ಸಂಘಟನೆಗಳು ಅಭಿಯಾನ ಹಮ್ಮಿಕೊಂಡಿವೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕನ್ನಯ್ಯ ಲಾಲ್ ಕೊಲೆ ಖಂಡಿಸಿ ಧಾರವಾಡದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್, ಶ್ರೀರಾಮ ಸೇನೆ, ಯುವ ಬ್ರಿಗೇಡ್, ಹಿಂದೂ ಜನಜಾಗೃತಿ ಸೇರಿ ಇತರೆ ಸಂಘಟನೆಗಳಿಂದ ಅಭಿಯಾನ ಆರಂಭವಾಗಲಿದೆ. “ನಾನು ಕನ್ನಯ್ಯ ಲಾಲ್”, “ನಾನು ನೂಪುರ್ ಶರ್ಮಾ ಬೆಂಬಲಿಗ” ಎಂಬ ದೊಡ್ಡ ಪ್ರಮಾಣದ ಅಭಿಯಾನ ನಡೆಯಲಿದ್ದು, ತಾಕತ್ ಇದ್ದರೆ ನಮ್ಮನ್ನು ಮುಟ್ಟಲಿ ನೋಡೋಣ, ನಾವು ಗುಜರಾತ್ ಮಾದರಿಯಲ್ಲೇ ಉತ್ತರ ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕಲ್ಲಂಗಡಿ ಹಣ್ಣು ಒಡೆದಾಗ ಹುಟ್ಟಿದ ಆಕ್ರೋಶ ಒಬ್ಬ ವ್ಯಕ್ತಿಯ ಬರ್ಬರ ಕೊಲೆಯಾದಾಗ ಯಾಕೆ ಹುಟ್ಟುತ್ತಿಲ್ಲ? ಆಗ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹಾಗೂ ಕುಮಾರಸ್ವಾಮಿ ದೊಡ್ಡದಾಗಿ ಮಾತಾನಾಡಿದ್ದರು. ಮುಸ್ಲಿಮರ ವೋಟ್‌ಗಾಗಿ ಏನೆಲ್ಲ ಮಾಡಿದ್ರಿ ಈಗ ಕನ್ಹಯ್ಯ ಲಾಲ್ ಕೊಲೆ ವಿಚಾರವಾಗಿ ಮಾತನಾಡಿ ಎಂದು ಎಡಪಂಥೀಯರು ಹಾಗೂ ಬುದ್ಧಿಜೀವಿಗಳ ಮೇಲೆ ಮುತಾಲಿಕ್ ಕಿಡಿಕಾರಿದ್ದಾರೆ.
PublicNext
29/06/2022 12:42 pm