ಕಾಸರಗೋಡು: ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಜೋಡುಕಲ್ಲು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸ್ ಎಸ್‌ಐ ಹಾಗೂ ಸಿಬ್ಬಂದಿಯನ್ನು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಆದರೆ ಶಾಸಕರ ಅವಾಜ್‌ಗೆ ಪೊಲೀಸರು ಮಾತ್ರ ಯಾವುದೇ ಸೊಪ್ಪು ಹಾಕಿಲ್ಲ.
ಮಂಜೇಶ್ವರದ ಜೋಡುಕಲ್ಲು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಶಾಸಕರಿಗೆ ಉತ್ತರಿಸಿದ ಎಸ್‌ಐ ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಲೈಸನ್ಸ್ ಇಲ್ದೇ ಸಂಚರಿಸುವವರನ್ನು ತಡೆದಿದ್ದೇನೆ ಎಂದು ಶಾಸಕರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರನ್ನು ಕಳುಹಿಸಲು ಶಾಸಕರು ಯತ್ನಿಸಿದ್ದು, ಆ ಸಂದರ್ಭದಲ್ಲಿ ನೀವು ನನಗೆ ಏನು ಮಾಡುತ್ತೀರಿ? ಹೊಡೆಯುವುದಾದರೆ ಹೊಡೆಯಿರಿ ಎಂದು ಶಾಸಕರಿಗೆ ಮರು ಉತ್ತರ ನೀಡಿದ್ದಾರೆ. ಈ ಎಲ್ಲಾ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
PublicNext
13/06/2022 11:07 pm