ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬುಲ್ಡೋಜರ್ ಅಸ್ತ್ರ ಪ್ರಯೋಗಿಸಿದ ಸಿಎಂ ಯೋಗಿ

ಲಕ್ನೋ: ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರ ನಡೆದಿದೆ.ಇನ್ನು ಕೆಲ ದುಷ್ಕರ್ಮಿಗಳು ಇದನ್ನೇ ಲಾಭವಾಗಿಸಿಕೊಂಡು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ. ಇಂಥವರನ್ನು ಪತ್ತೆ ಹಚ್ಚಿರುವ ಉತ್ತರ ಪ್ರದೇಶ ಸರಕಾರ, ಇವರ ಮನೆಗಳ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗಿಸಿದೆ.

ದೇಶಾದ್ಯಂತ ಶಾಂತಿಯುತ ಪ್ರತಿಭಟನೆ ನಡೆ ಯುತ್ತಿದ್ದರೂ ಉತ್ತರ ಪ್ರದೇಶ, ಝಾರ್ಖಂಡ್ ಮತ್ತು ಪಶ್ಚಿಮ ಬಂಗಾಲದಲ್ಲಿ ಹೆಚ್ಚು ಹಿಂಸಾಚಾರ ನಡೆದಿದೆ. ಅದರಲ್ಲೂ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮತ್ತು ಸಹರಾನ್ಪುರದಲ್ಲಿ ಹೆಚ್ಚು ಗಲಾಟೆಗಳಾಗಿವೆ. ಇಲ್ಲಿ ಗಲಾಟೆಗೆ ಕಾರಣರಾದವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, 200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಪೊಲೀಸರೇ ಪ್ರತಿಭಟನಕಾರರ ಟಾರ್ಗೆಟ್ ಆಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರುವಂತೆ ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಕೇಂದ್ರ ಗೃಹ ಇಲಾಖೆ ಶುಕ್ರವಾರವೇ ಸುತ್ತೋಲೆ ರವಾನಿಸಿದೆ.ಆಕ್ಷೇ ಪಾರ್ಹ ಹೇಳಿಕೆ ನೀಡಿ ವಜಾಗೊಂಡಿರುವ ಬಿಜೆಪಿ ನಾಯಕ ನವೀನ್ ಕುಮಾರ್ ಜಿಂದಾಲ್ ಅವರ ಕುಟುಂಬ ಈಗ ದಿಲ್ಲಿಯನ್ನೇ ತೊರೆದಿದೆ.

Edited By : Nirmala Aralikatti
PublicNext

PublicNext

12/06/2022 09:00 am

Cinque Terre

142.37 K

Cinque Terre

35

ಸಂಬಂಧಿತ ಸುದ್ದಿ