ಅಹಮದಾಬಾದ್: ಜಾಮೀನು ದೊರೆತ ನಂತರ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಮತ್ತೊಮ್ಮೆ ಬಂಧಿಸಲಾಗಿದೆ. ಈ ಬಾರಿ ಅವರನ್ನು ಬೇರೆ ಪ್ರಕರಣದ ಅಡಿ ಬಂಧಿಸಲಾಗಿದೆ ಎನ್ನಲಾಗಿದೆ.
ಎರಡು ಟ್ವೀಟ್‌ಗಳ ಕುರಿತು ಸ್ಥಳೀಯ ಬಿಜೆಪಿ ನಾಯಕರೊಬ್ಬರು ಬಾರ್‌ಪೇಟಾದಲ್ಲಿ ದಾಖಲಿಸಿದ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಅಸ್ಸಾಂ ನ್ಯಾಯಾಲಯವು ಮೇವಾನಿ ಅವರಿಗೆ ಜಾಮೀನು ನೀಡಿತ್ತು. ಇದಾದ ಕೆಲವೇ ಗಂಟೆಗಳ ನಂತರ, ಮತ್ತೊಮ್ಮೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಕೆಲವು ವರದಿಗಳು ಎರಡನೇ ಬಂಧನವನ್ನು ಅದೇ ಟ್ವೀಟ್‌ಗಳಿಗೆ ಲಿಂಕ್ ಮಾಡಲಾಗಿದೆ ಎಂದಿವೆ. ಟ್ವೀಟ್‌ಗಳು ಕೋಮು ಶಾಂತಿಗೆ ಕರೆ ನೀಡಿವೆ. ಆದರೆ ನರೇಂದ್ರ ಮೋದಿಯವರನ್ನು ‘ಗೋಡ್ಸೆ ಆರಾಧಕ’ ಮತ್ತು ಆರ್‌ಎಸ್‌ಎಸ್ ಅನ್ನು “ದೇಶದ್ರೋಹಿ” ಎಂದು ಟೀಕಿಸಿದ್ದರೆಂದು ಪ್ರಕರಣ ದಾಖಲಿಸಲಾಗಿದೆ.
PublicNext
25/04/2022 07:34 pm