ಕಲಬುರಗಿ: ಪಿಎಸ್ ಐ ನೇಮಕಾತಿ ಹಗರಣ ಸಂಬಂಧ ತನಿಖೆ ತೀವ್ರಗೊಳಿಸಿದ ಸಿಐಡಿ ಅಧಿಕಾರಿಗಳು ಸದ್ಯ ಮತ್ತೋರ್ವ ಆರೋಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ನನ್ನು ಅರೆಸ್ಟ್ ಮಾಡಲಾಗಿದೆ.ಮಹಾಂತೇಶ್ ಕುತ್ತಿಗೆ ಪಟ್ಟಿ ಹಿಡಿದು ಸಿಐಡಿ ಟೀಂ ಎಳೆ ತಂದಿದೆ. ಈ ವೇಳೆ ಮಹಾಂತೇಶ್ ಪಾಟೀಲ್ ಬಂಧಿಸಬೇಡಿ ಎಂದು ಬೆಂಬಲಿಗರು ಹೈಡ್ರಾಮಾ ಮಾಡಿದ್ದಾರೆ. ಇದೇ ವೇಳೆ ಬಂಧಿತ ಮಹಾಂತೇಶ್
ಸಿಐಡಿ ಅಧಿಕಾರಿಗಳಿಗೆ ಆವಾಜ್ ಕೂಡ ಹಾಕಿದ್ದಾರೆ ಎನ್ನಲಾಗಿದೆ.
ಅಜ್ಞಾತ ಸ್ಥಳದಿಂದ ಸಿಐಡಿ ಅಧಿಕಾರಿಗಳಿಗೆ ಕರೆ ಮಾಡಿ ಧಮ್ಕಿ ನೀಡಲಾಗಿದೆ. ನನ್ನ ಸಹೋದರನನ್ನ ಯಾಕೆ ಬಂಧಿಸಿದ್ದೀರಿ? ಎಂದು ಪ್ರಶ್ನಿಸಿರೋ ಮಹಾಂತೇಶ್ ಸಹೋದರ ಆರ್.ಡಿ ಪಾಟೀಲ್ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಆವಾಜ್ ಹಾಕಿದ್ದಾರೆ.
PublicNext
22/04/2022 04:13 pm