ಉಡುಪಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ಸಚಿವ ಈಶ್ವರಪ್ಪ ವಿರುದ್ಧ ಡೆತ್ ನೋಟ್ ಬರೆದಿಟ್ಟು ಉಡುಪಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆ ಗಾಢವಾಗಿದೆ.ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಉಡುಪಿ ಪ್ರವಾಸದಲ್ಲಿರುವ ಇದೇ ಸಂದರ್ಭದಲ್ಲಿ ಬೆಳಗಾವಿಯ ಸಂತೋಷ್ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ಇದೀಗ ರಾಜಕೀಯ ಹಾಗೂ ಸಾಮಾಜಿಕವಾಗಿ ಭಾರಿ ಚರ್ಚೆಯಲ್ಲಿದೆ.
ಅಷ್ಟಕ್ಕೂ ಸಂತೋಷ್ ಉಡುಪಿಗೆ ಬಂದಿದ್ದೇಕೆ ಎಂಬ ವಿಷಯವೊಂದು ಕುತೂಹಲ ಕೆರಳಿಸಿದೆ.
ಕೆಲವು ಮೂಲಗಳ ಪ್ರಕಾರ ಸೋಮವಾರ-ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಡುಪಿ ಪ್ರವಾಸದಲ್ಲಿರುವ ಕಾರಣ ಸಿಎಂ ಅವರನ್ನು ಭೇಟಿಯಾಗಿ ತಮ್ಮ ಬಾಕಿ ಹಣ ಪಾವತಿ ಕುರಿತು ಬೇಡಿಕೆ ಇಡಲು ಬಂದಿದ್ದರು. ಆದರೆ ಸಿಎಂ ಭೇಟಿ ಸಾಧ್ಯವಾಗದ್ದರಿಂದ ಲಾಡ್ಜ್ ನಲ್ಲಿ ತಂಗಿರುವ ಸಾಧ್ಯತೆ ಇದ್ದು, ಬಳಿಕ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.
ಇನ್ನು ಸಂತೋಷ್ ಈ ಹಿಂದೆಯೂ ಬಾಕಿ ಹಣ ಪಾವತಿ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದರು.
PublicNext
14/04/2022 07:33 am