ಬೆಂಗಳೂರು : ಪಾವಗಡ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ಬಿ ಶ್ರೀರಾಮುಲು ಸಾರಿಗೆ ಇಲಾಖೆ ನಾಲ್ಕು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.ಈ ದುರಂತಕ್ಕೆ ನಿರ್ಲಕ್ಷ್ಯತೆಯೇ ಕಾರಣ ಹಾಗಾಗಿ ನಾಲ್ವರು ಸಾರಿಗೆ ಇಲಾಖೆ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ತಿಳಿಸಿದರು.
ಇನ್ಮುಂದೆ ಬಸ್ ಟಾಪ್ ಮೇಲೆ ಕುಳಿತು ಪ್ರಯಾಣಿಸುವುದಕ್ಕೆ ಕಡಿವಾಣ ಹಾಕುತ್ತೇವೆ. ಬಸ್ ಸಾಮರ್ಥ್ಯಕ್ಕೂ ಮೀರಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದೇ ಇಂತಹ ಅನಾಹುತಕ್ಕೆ ಕಾರಣ.ತುಮಕೂರಿನ ಪಾವಗಡದಲ್ಲಿಯ ಬಸ್ ದುರಂತಕ್ಕೂ ಇದೇ ಕಾರಣ ಹಾಗಾಗಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.
PublicNext
22/03/2022 04:39 pm