ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಇಂದು ಹರ್ಷ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಬಿಜೆಪಿ ಯುವ ಮೋರ್ಚಾದ ವತಿಯಿಂದ 5 ಲಕ್ಷ ರೂ. ಚೆಕ್ ನೀಡಿದ್ದಾರೆ.
ಫೇಸ್ ಬುಕ್ ಪೋಸ್ಟ್ ಮಾಡಿದ್ದಾಗ ಈ ರೀತಿ ಆಗುತ್ತದೆ ಅಂದರೆ ಐಸಿಸಿಗೂ ನಮಗೂ ಏನೂ ವ್ಯತ್ಯಾಸ ಇದೆ? ಹತ್ಯೆ ಮಾಡಿದ ರಾಕ್ಷಕರಿಗೆ ಒಂದು ಮಾತು ಹೇಳುತ್ತೇನೆ. ರಾಜ್ಯದಲ್ಲಿ ಹಿಂದೂತ್ವದ ಸರ್ಕಾರ ಇದ್ದು, ನಿಮ್ಮನ್ನು ಹುಡುಕಿ ಗಲ್ಲಿಗೇರಿಸಬೇಕು ಎಂದು ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮನವಿ ಮಾಡಿಕೊಳ್ಳುತ್ತೇನೆ. ಹಿಂದೂ ಹರ್ಷನ ಹತ್ಯೆ ಮರ್ಡರ್ ಅಲ್ಲ, ಭಯೋತ್ಪಾದಕ ಕೃತ್ಯ ಅಂತಾನೇ ಪ್ರಕರಣ ದಾಖಲಾಗಬೇಕು ಎಂದರು.
ರಾಜ್ಯದಲ್ಲಿ ಕೋಕಾ ಕಾಯ್ದೆ ಜಾರಿಗೊಳಿಸಬೇಕು. ಎಸ್ ಪಿಐ, ಪಿಎಫ್ ಐ, ಸಿಎಫ್ ಐ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಇವುಗಳನ್ನೂ ಬ್ಯಾನ್ ಮಾಡಲು ಕೇಂದ್ರ ಸರ್ಕಾರಕ್ಕೆ ದಾಖಲೆ ಸಮೇತ ಕರುಡು ಸಲ್ಲಿಕೆ ಮಾಡಬೇಕು ಎಂದರು.
PublicNext
22/02/2022 10:22 pm