ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಖಿಂಪುರ್ ಖೇರಿ ಹಿಂಸಾಚಾರ : ಸೂಕ್ತ ಸಾಕ್ಷ್ಯಾಧಾರವಿಲ್ಲದೆ ಯಾರ ಬಂಧನವು ಇಲ್ಲ : ಸಿಎಂ ಯೋಗಿ

ಗೋರಖ್ಪುರ್ : ಲಖಿಂಪುರ್–ಖೇರಿ ಜಿಲ್ಲೆಯಲ್ಲಿ ನಾಲ್ವರು ರೈತರು ಸೇರಿ ಎಂಟು ಮಂದಿಯ ಹತ್ಯೆ ಹಾಗೂ ಹಿಂಸಾಚಾರ ಘಟನೆ ನಿಜಕ್ಕೂ ಭಯಂಕರವಾದ ಪ್ರಕರಣ. ಈ ಹಿಂಸಾಚಾರದ ಕುರಿತು ಯೋಗಿ ಸರ್ಕಾರಕ್ಕೆ ಸುಪ್ರೀಂ ಚಾಟಿ ಬೀಸಿದೆ.

ಈ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಕೈಗೊಂಡ ಕ್ರಮಗಳು ತೃಪ್ತಿಕರವಲ್ಲ ಎಂದು ಸುಪ್ರೀಂ ತರಾಟೆಗೆ ತೆಗೆದುಕೊಂಡಿದೆ. ಆರೋಪಿಗಳನ್ನು ಏಕೆ ಬಂಧಿಸಿಲ್ಲ ಪ್ರಶ್ನಿಸಿಲ್ಲ ಎಂದು ಕೇಳಿದ ಕೋರ್ಟ್ , ಸಾಕ್ಷ್ಯಗಳನ್ನು ಸಂರಕ್ಷಿಸುವಂತೆ ಸೂಚಿಸಿದೆ. ಸರ್ಕಾರವು ಮಾತಿಗಷ್ಟೇ ಸೀಮಿತ, ಕ್ರಿಯೆಯಲ್ಲಿ ಏನೂ ಇಲ್ಲ ಎಂದಿದೆ.

ಇನ್ನು ಈ ಎಲ್ಲ ಘಟನೆಗಳ ಬಳಿಕ ಯು.ಪಿ ಸಿಎಂ ಯೋಗಿ ಆದಿತ್ಯನಾಥ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಇಲ್ಲದೆ ಯಾರನ್ನು ಬಂಧಿಸುವುದಿಲ್ಲ ಎಂದು ಹೇಳಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡುತ್ತಿರುವ ಪ್ರತಿಪಕ್ಷಗಳ ಕುರಿತು 'ಒಳ್ಳೆಯ ಸಂದೇಶವಾಹಕರಿಲ್ಲ' ಎಂದು ಇದೇ ಸಂದರ್ಭದಲ್ಲಿ ಯೋಗಿ ತಿರುಗೇಟು ನೀಡಿದ್ದಾರೆ.

ಕಾನೂನಿನ ಮುಂದೆ ಎಲ್ಲರು ಸಮಾನರು. ಸುಪ್ರೀಂಕೋರ್ಟ್ ಪ್ರಕಾರ, ಯಾವುದೇ ಸಾಕ್ಷ್ಯವಿಲ್ಲದೆ ಯಾರೊಬ್ಬರನ್ನು ಬಂಧಿಸಲಾಗದು, ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. ಲಿಖಿತ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಯಾರನ್ನು ಬಿಡುವ ಮಾತೇ ಇಲ್ಲ ಎಂದು ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎಂ ಯೋಗಿ ಹೇಳಿದರು. ಪ್ರಕರಣದ ಎಫ್ ಐಆರ್ ನಲ್ಲಿ ಹೆಸರಿಸಲಾದ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪದ ಕುರಿತು, ಆರೋಪ ಸಾಬೀತು ಮಾಡುವಂತಹ ವಿಡಿಯೋ ಇಲ್ಲ. ಪುರಾವೆಗಳಿದ್ದರೆ, ಅವರು ಅದನ್ನು ಅಪ್ ಲೋಡ್ ಮಾಡಬಹುದು ಎಂದಿದ್ದಾರೆ.

Edited By : Nirmala Aralikatti
PublicNext

PublicNext

09/10/2021 09:31 am

Cinque Terre

44.61 K

Cinque Terre

15