ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿ.ಜಯಲಲಿತಾ ಆಪ್ತೆಗೆ 2 ವಾರದಲ್ಲಿ ಬಂಧನ ಮುಕ್ತಿ : ಭವ್ಯ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

ಬೆಂಗಳೂರು : ದಿ. ಜಯಲಲಿತಾ ಆಪ್ತೆ ಚಿನ್ನಮ್ಮ ಆಲಿಯಸ್ ಶಶಿಕಲಾ ಇನ್ನ ಎರಡೇ ವಾರದಲ್ಲಿ ಬಿಡುಗಡೆ ಆಗಲಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಪರಪ್ಪನ ಆಗ್ರಹಾರ ಜೈಲಲ್ಲಿರುವ ಶಶಿಕಲಾ ಬಿಡುಗಡೆಗೆ ಹಿನ್ನೆಲೆಯಲ್ಲಿ ಅವರಿಗೆ ಭವ್ಯ ಸ್ವಾಗತ ಕೋರಲು ತಮಿಳುನಾಡಿನಲ್ಲಿ ಭರ್ಜರಿ ಸಿದ್ಧತೆ ನಡೆದಿದೆ.

ವಿಧಾನಸಭಾ ಚುನಾವಣೆ ಹಿನ್ನಲೆ ಶಶಿಕಲಾ ರಾಜಕೀಯ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಶಶಿಕಲಾಗಿಂತ ಮುಂಚೆ ಆಕೆಯ ಸಹಚರ ಸುಧಾಕರನ್ ಬಿಡುಗಡೆಯಾಗಬೇಕಿತ್ತು. ಆದರೆ, ಹತ್ತು ಕೋಟಿ ದಂಡ ಪಾವತಿ ಮಾಡದ ಹಿನ್ನಲೆ ಸುಧಾಕರನ್ ಕೂಡ ಶಶಿಕಲಾ ಜೊತೆ ಬಿಡುಗಡೆ ಮಾಡಲು ತಂತ್ರ ರೂಪಿಸಿದ್ದಾರೆ.

ಸುಧಾಕರನ್ ಗೆ ಇದೇ ತಿಂಗಳ 14 ರ ಒಳಗೆ ಬಿಡುಗಡೆಗೆ ಅವಕಾಶವಿತ್ತು. ದಂಡ ಕಟ್ಟಿದ್ದರೆ ಇಷ್ಟರಲ್ಲಾಗಲೇ ಸುಧಾಕರನ್ ಬಿಡುಗಡೆಯಾಗುತ್ತಿದ್ದರು ಆದರೆ ಇನ್ನು ದಂಡದ ಹಣ ಪಾವತಿ ಮಾಡಿಸದೆ ಒಟ್ಟಿಗೆ ಬಿಡುಗಡೆಯಾಗಲು ಜೈಲಲ್ಲೇ ತಂತ್ರಹೆಣೆಯಲಾಗಿದೆ.

ಶಶಿಕಲಾ , ಸುಧಾಕರನ್, ಜೈಲಿನಿಂದ ಒಟ್ಟಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಶಶಿಕಲಾ ಬಿಡುಗಡೆ ದಿನ ಜೈಲಿನ ಬಳಿ ಲಕ್ಷಾಂತರ ಜನ ಜಮಾವಣೆ ನಿರೀಕ್ಷೆ ಇದೆ. ಐದು ಸಾವಿರಕ್ಕೂ ಹೆಚ್ಚು ವಾಹನಗಳು ತಮಿಳುನಾಡಿನಿಂದ ಪರಪ್ಪನ ಅಗ್ರಹಾರ ಜೈಲಿನ ಬಳಿ ಬರುವ ಸಾಧ್ಯತೆ ಇದೆ.

ಈ ಮೂಲಕ ಶಶಿಕಾ ಶಕ್ತಿ ಪ್ರದರ್ಶಿಸುವ ಪ್ರಯತ್ನ ನಡೆಸಲಾಗಿದೆ.ಈ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ರವಾನೆಯಾಗಿದ್ದು, ಬಿಗಿ ಭದ್ರತೆಯೊಂದಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

Edited By : Nirmala Aralikatti
PublicNext

PublicNext

13/01/2021 08:16 am

Cinque Terre

99.2 K

Cinque Terre

7

ಸಂಬಂಧಿತ ಸುದ್ದಿ