ಐಜ್ವಾಲ್: ಮಿಜೋರಾಮ್ ಸಿಎಂ ಝೋರಂತಂಗಾ ಅವರ ಪುತ್ರಿ ಮಿಲಾರಿ ಚಾಂಗ್ಟೆ ಅವರು ವೈದ್ಯರ ಮೇಲೆ ಹಲ್ಲೆ ಮಾಡಿದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದು ಸಿಎಂ ಪುತ್ರಿಯ ಗೂಂಡಾ ವರ್ತನೆ ಎಂದು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
ಮಿಲಾರಿ ಚಾಂಗ್ಟೆ ಅವರು ಅಪಾಂಯಿಂಟ್‌ಮೆಂಟ್ ಇಲ್ಲದೇ ವೈದ್ಯರನ್ನು ಭೇಟಿಯಾಗಲು ಇಚ್ಛಿಸಿದ್ದರು. ಆದ್ರೆ ವೈದ್ಯರು ಇದಕ್ಕೆ ನಿರಾಕರಿಸಿದ್ದರು. ಕೆಲಹೊತ್ತು ವೈದ್ಯರ ಚೇಂಬರ್ ಬಳಿ ಕಾಯ್ದ ಮಿಲಾರಿ ಅವರು ಸೀದಾ ಒಳಗೆ ನುಗ್ಗಿ ಚರ್ಮರೋಗ ತಜ್ಞ ವೈದ್ಯರ ಮುಖಕ್ಕೆ ಪಂಚ್ ಕೊಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಡೆದಿದ್ದ ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಘಟನೆಯ ನಂತರ ಸಿಎಂ ಝೋರಂತಂಗಾ ಅವರು ಶನಿವಾರ ಇನ್ಸ್ಟಾಗ್ರಾಮ್‌ನಲ್ಲಿ ಕ್ಷಮೆ ಯಾಚನೆಯ ಪೋಸ್ಟ್ ಹಾಕಿದ್ದಾರೆ. ನಾನು ಮಗಳ ವರ್ತನೆಯನ್ನು ಸಹಿಸೋದಿಲ್ಲ. ನಮಗೆ ಹೇಳಲು ಏನೂ ಉಳಿದಿಲ್ಲ. ಮಗಳ ಈ ನಡವಳಿಯನ್ನು ನಾವು ಯಾವ ಕಾರಣಕ್ಕೂ ಸಮರ್ಥಿಸಿಕೊಳ್ಳೋದಿಲ್ಲ. ಹಲ್ಲೆಗೊಳಗಾದ ವೈದ್ಯರು ಕ್ಷಮಿಸಬೇಕು ಎಂದಿದ್ದಾರೆ. ಈ ಕ್ಷಮಾಪಣೆ ಪತ್ರಕ್ಕೆ ಸಿಎಂ ಝೋರಂತಂಗಾ ಅವರ ಪತ್ನಿ ಕೂಡ ಸಹಿ ಹಾಕಿದ್ದಾರೆ.
PublicNext
23/08/2022 03:01 pm