ನವದೆಹಲಿ: ಇಸ್ಲಾಂ ಧರ್ಮಗುರು ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಿತ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದ ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಮನಸ್ಸಿಗೆ ಬಂದಂತೆ ಮಾತನಾಡಿದ್ದೀರಾ ಅಂತಲೂ ಚಾಟಿ ಬೀಸಿದೆ.
ಅತ್ಯಾಚಾರದ ಬೆದರಿಕೆ ಹೆಚ್ಚಾಗಿವೆ. ನನ್ನ ಮೇಲೆ ವಿವಿಧ ಕಡೆಗೆ ಎಫ್‌ಐಆರ್ ದಾಖಲಾಗಿವೆ. ಜೀವ ಬೆದರಿಕೆನೂ ಹೆಚ್ಚಾಗಿವೆ ಎಂದು ನೂಪುರ್ ಶರ್ಮಾ,ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನೂಪುರ್ ಶರ್ಮಾ ಸಲ್ಲಿಸಿರೋ ಅರ್ಜಿ ವಿಚಾರಣೆ ನಡೆಸಿರೋ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ನೂರುಪರ್ ಶರ್ಮಾ ಹೇಳಿಕೆಯಿಂದ ಇಡೀ ದೇಶದಲ್ಲಿ ಅಶಾಂತಿ ತಲೆದೋರಿದೆ.ಉದಯಪುರ ಟೈಲರ್ ಹತ್ಯೆನೂ ಈ ಒಂದು ಕಾರಣಕ್ಕೇನೆ ಆಗಿದೆ.ನೂಪುರ ಶರ್ಮಾ ದೇಶದ ಕ್ಷಮೆ ಕೇಳಬೇಕು ಎಂದು ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ.
PublicNext
01/07/2022 01:08 pm