ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೌಕಾನೆಲೆಯಲ್ಲಿ ಅಡಗಿ ಕುಳಿತ ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ

ಕೊಲಂಬೋ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಎಲ್ಲೆಡೆ ಹಿಂಸಾಚಾರಗಳು ಭುಗಿಲೆದ್ದಿವೆ. ಹೀಗಾಗಿ ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ನೌಕಾ ನೆಲೆಯೊಂದರಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಇದೆ.

ತಮ್ಮ ಕುಟುಂಬ ಸದಸ್ಯರ ಸಮೇತ ಮಹಿಂದಾ ರಾಜಪಕ್ಸ ಅವರು ದ್ವೀಪ ರಾಷ್ಟ್ರದ ಈಶಾನ್ಯ ಭಾಗದಲ್ಲಿರುವ ಟ್ರಿಂಕೋಮಲೀ ಎಂಬಲ್ಲಿನ ನೌಕಾ ನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವರದಿಯಾಗಿದೆ. ತೀವ್ರಗೊಂಡ ಆರ್ಥಿಕ ಬಿಕ್ಕಟ್ಟು, ನಿರಂತರ ಹಸಿವು ಹಾಗೂ ರಾಜಕೀಯ ಅಸ್ಥಿರತೆಯಿಂದ ಶ್ರೀಲಂಕಾ ಜನ ಕಂಗೆಟ್ಟಿದ್ದಾರೆ. ಮತ್ತು ಸಮರೋಪಾದಿ ಪ್ರತಿಭಟನೆಗಳು ಹಿಂಸಾ ಸ್ವರೂಪಕ್ಕೆ ತಿರುಗಿವೆ. ಹೀಗಾಗಿ ಪ್ರಾಣಭೀತಿಯಿಂದ ಮಹಿಂದಾ ರಾಜಪಕ್ಸೆ ಅಡಗಿ ಕುಳಿತಿದ್ದಾರೆ ಎನ್ನಲಾಗಿದೆ.

ಮಂಗಳವಾರ ಬೆಳಿಗ್ಗೆಯಷ್ಟೇ ಭಾರಿ ಸೇನಾ ಭದ್ರತೆಯ ನಡುವೆ ಪ್ರಧಾನಿ ಅಧಿಕೃತ ನಿವಾಸ ಟೆಂಪಲ್ ಟ್ರೀಸ್ ಅನ್ನು ತೊರೆದಿದ್ದ ರಾಜಪಕ್ಸ, ರಾಜಧಾನಿ ಕೊಲಂಬೋದಿಂದ ಸುಮಾರು 270 ಕಿಮೀ ದೂರದಲ್ಲಿರುವ ನೌಕಾ ನೆಲೆಗೆ ಕುಟುಂಬದ ಸಮೇತ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದಾರೆ. ನೌಕಾ ನೆಲೆಯ ಹೊರ ಭಾಗದಲ್ಲಿ ಕೂಡ ಭಾರಿ ಪ್ರತಿಭಟನೆ ನಡೆಯುತ್ತಿದೆ.

Edited By : Nagaraj Tulugeri
PublicNext

PublicNext

10/05/2022 04:59 pm

Cinque Terre

100.44 K

Cinque Terre

12

ಸಂಬಂಧಿತ ಸುದ್ದಿ