20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಅಮೆರಿಕ, ಬ್ರಿಟನ್ ಮತ್ತು ನ್ಯಾಟೊ ಸೇನೆಗಳು ಮಂಗಳವಾರದಂದು ತಮ್ಮ ದೇಶಗಳಿಗೆ ವಾಪಸ್ಸಾದವು. ಹೋಗುವ ಮುನ್ನ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ ಮೊದಲಾದವುಗಳನ್ನು ಅಫ್ಘಾನಿಸ್ತಾನದಲ್ಲೇ ಬಿಟ್ಟಿದ್ದಾರೆ.
ಈ ಯುದ್ಧ ಸಂಪತ್ತನ್ನೆಲ್ಲ ನೋಡಿದ ತಾಲಿಬಾನಿಗಳು ವಿಘ್ನ ಸಂತೋಷ ಪಟ್ಟಿದ್ದರು. ಆದರೆ ಈಗ ಅವರ ಖುಷಿ ಠುಸ್ ಆಗಿದೆ. ಕಾರಣ ಅಪ್ಘನ್ ತೊರೆದ ಸೇನಾ ಪಡೆಗಳು ಯುದ್ಧ ವಿಮಾನ ಸೇರಿದಂತೆ ಹಲವು ಯುದ್ಧೋಪಕರಣಗಳನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಿವೆ. ಈ ಎಲ್ಲ ಸಾಮಗ್ರಿಗಳ ಒಟ್ಟು ಮೌಲ್ಯ 6 ಲಕ್ಷ ಕೋಟಿ ರೂ. ಎಂದು ವರದಿಯಾಗಿತ್ತು.
ಇದೇ ಯುದ್ಧ ವಿಮಾನ ಹಾಗೂ ಸಲಕರಣೆಗಳನ್ನು ಬಳಸಿ ಪಂಜ್‌ಶೀರ್ ಪ್ರಾಂತ್ಯವನ್ನು ಗೆಲ್ಲಬಹುದೆಂದು ತಾಲಿಬಾನಿಗಳು ಹೊಂಚು ಹಾಕಿದ್ದರು. ಆದ್ರೆ ಈ ವಿಚಾರದಲ್ಲಿ ಅವರ ಪ್ಲ್ಯಾನ್ ಉಲ್ಟಾ ಆಗಿದೆ.
PublicNext
02/09/2021 11:51 am