ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೋಷನ್ ಬೇಗ್ ಇನ್ನು 3 ದಿನ ಸಿಬಿಐ ಕಸ್ಟಡಿಗೆ

ಬೆಂಗಳೂರು: ಐಎಂಎ ಕೇಸ್ ಗೆ ಸಂಬಂಧಿಸಿದಂತೆ ಬಂಧನವಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಕೋರ್ಟ್ 3 ದಿನ ಸಿಬಿಐ ಕಸ್ಟಡಿಗೆ ನೀಡಿದೆ.

ಐ ಮಾನಿಟರಿ ಅಡ್ವೈಸರಿ(ಐಎಂಎ) ಸಮೂಹ ಕಂಪನಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ನ.22ರಂದು ಸಿಬಿಐ ಅಧಿಕಾರಿಗಳು ಮನೆಗೆ ಹೋಗಿ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದು ಗಂಗಾನಗರದ ಕಚೇರಿಗೆ ವಿಚಾರಣೆಗೆ ಕರೆ ತಂದಿದ್ದರು.

ಅರೆಸ್ಟ್ ಬಳಿಕ ಕೋರ್ಟ್ ಬೇಗ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು.

ಪರಪ್ಪನ ಅಗ್ರಹಾರ ಸೇರಿದ್ದ ಬೇಗ್ ರನ್ನು ಈ ಪ್ರಕರಣದಲ್ಲಿ ವಿಚಾರಣೆ ನಡೆಸಬೇಕು ಎಂದು ಇಂದು ಸಿಬಿಐ ಕೋರ್ಟ್ ಗೆ ಮನವಿ ಮಾಡಿತ್ತು. ವಾದವನ್ನು ಪುರಸ್ಕರಿಸಿದ ಕೋರ್ಟ್ ಮೂರು ದಿನ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ.

Edited By : Nirmala Aralikatti
PublicNext

PublicNext

25/11/2020 05:04 pm

Cinque Terre

204.6 K

Cinque Terre

4

ಸಂಬಂಧಿತ ಸುದ್ದಿ