ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಘಾನ್ ಮಸೀದಿ ಸ್ಫೋಟ: ಹೊಣೆ ಹೊತ್ತ ಐಸಿಸ್ ಉಗ್ರ ಸಂಘಟನೆ

ಕಾಬೂಲ್(ಅಫ್ಘಾನಿಸ್ತಾನ): ಕೇವಲ ಒಂದು ವಾರದ ಹಿಂದಷ್ಟೇ ಅಪ್ಘಾನಿಸ್ತಾನದ ಕುಂದುಜ್ ಮಸೀದಿಯಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಘಟನೆಯಲ್ಲಿ 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಈಗ ಐಸಿಸ್ ಉಗ್ರ ಸಂಘಟನೆಯು ಈ ಘಟನೆಯ ಹೊಣೆ ಹೊತ್ತುಕೊಂಡಿದೆ. ಕುಂದುಜ್ ಘಟನೆ ನಡೆದ ಒಂದು ವಾರದ ಅಂತರದಲ್ಲೇ ನಿನ್ನೆ ಶುಕ್ರವಾರ ಪಾಕಿಸ್ತಾನದ‌ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ. ಪಾಕಿಸ್ತಾನದ ಕಂದಹಾರ್ ನ ಮಸೀದಿಯೊಂದರಲ್ಲಿ ಜನಜಂಗುಳಿ ಸೇರಿದ್ದ ವೇಳೆ ಸ್ಫೋಟ ಸಂಭವಿಸಿತ್ತು. ಸ್ಥಳೀಯರು ಹೇಳುವ ಪ್ರಕಾರ ಮಸೀದಿ ಆವರಣದ ಮೂರು ಕಡೆ ಸ್ಫೋಟವಾಗಿದೆ. ಘಟನೆಯಲ್ಲಿ ಸುಮಾರು 47 ಮಂದಿ ಮೃತಪಟ್ಟಿದ್ದಾರೆ. ಈ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗ್ರುಪ್ ಹೊತ್ತುಕೊಂಡಿದೆ.

Edited By : Nagaraj Tulugeri
PublicNext

PublicNext

16/10/2021 07:34 am

Cinque Terre

68.83 K

Cinque Terre

9