ಉದಯಪುರ: ಹಿಂದೂ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹತ್ಯೆಯಿಂದ ಕನ್ಹಯ್ಯ ಲಾಲ್ ಕುಟುಂಬ ಅನಾಥವಾಗಿದೆ. ಮನೆಗೆ ದುಡಿಯುವ ಕೈನೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿಯೇ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಆರ್ಥಿಕ ನೆರವಿಗಾಗಿಯೇ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ.
ಈ ಒಂದು ಮಹತ್ತರ ಕಾರ್ಯಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಕೇವಲ ಒಂದೇ ದಿನಕ್ಕೆ ಒಂದು ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ. ದೇಶ ಮತ್ತು ವಿದೇಶದಲ್ಲಿರೋ ಜನರು ದೇಣಿಗೆ ಕೊಡ್ತಾನೇ ಇದ್ದಾರೆ. ಇದು 1.25 ಕೋಟಿ ತಲುವಪು ಸಾಧ್ಯತೆನೂ ತಳ್ಳಿಹಾಕುವಂತಿಲ್ಲ.
ಇಸ್ಲಾಂ ಮೂಲಭೂತವಾದಿಗಳು ಸಾಮಾನ್ಯ ಟೈಲರ್‌ನನ್ನ ಹತ್ಯೆಗೈದು ಅಟ್ಟಹಾಸ ಮೆರೆದಿದ್ದಾರೆ. ಇವರ ಈ ಪೈಶಾಚಿಕ ಕೃತ್ಯವನ್ನ ಜನ ತೀವ್ರವಾಗಿಯೇ ವಿರೋಧಿಸಿದ್ದಾರೆ.
PublicNext
30/06/2022 10:23 am