ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚುನಾವಣೆ ಮುನ್ನವೇ ಪಂಚಾಯ್ತಿ ಸದಸ್ಯರ ಆಯ್ಕೆ: ಜನತಂತ್ರ ವ್ಯವಸ್ಥೆಗೆ ಅವಮಾನ

ಮಂಡ್ಯ: ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣಾ ಕಾವು ಹೆಚ್ಚಾಗಿದೆ. ಈ ಮೂಲಕ ಲೋಕಲ್ ಫೈಟ್ ತಾರಕಕ್ಕೇರಿದೆ. ಈ ನಡುವೆ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ನೆಪ ಇಟ್ಟುಕೊಂಡು ಗ್ರಾಮ ಪಂಚಾಯ್ತಿಗಳಲ್ಲಿ ಅಭ್ಯರ್ಥಿ ಸ್ಥಾನವನ್ನು ಹರಾಜು ಹಾಕಲಾಗುತ್ತಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಲಾಳನಕೆರೆಯಲ್ಲಿ ಆಸ್ತಿ ಹರಾಜು ಹಾಕಿದಂತೆ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನವನ್ನು ಹರಾಜು ಹಾಕುತ್ತಿರುವ ಸಂಗತಿ ಈಗ ಬೆಳಕಿಗೆ ಬಂದಿದೆ. ಲಕ್ಷಾಂತರ ರೂಪಾಯಿಗಳಿಗೆ ಗ್ರಾಮ ಪಂಚಾಯ್ತಿ ಸ್ಥಾನವನ್ನು ಲಾಳನಕೆರೆ ಗ್ರಾಮಸ್ಥರು ಮನೆಯೊಂದರಲ್ಲಿ ಬಿಡ್ ಮಾಡುವ ಮೂಲಕ ಹರಾಜು ಹಾಕಿದ್ದಾರೆ.

ಇದಕ್ಕಾಗಿ ಗ್ರಾಮದಲ್ಲಿ ಸಭೆ ಸೇರಿದ ಗ್ರಾಮಸ್ಥರು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು ಚುನಾವಣಾಧಿಕಾರಿಗಳು ಈ ಬಗ್ಗೆ ಬಿಗಿ ಕ್ರಮ ಕೈಗೊಳ್ಳಬೇಕಿದೆ.

Edited By : Nagaraj Tulugeri
PublicNext

PublicNext

09/12/2020 11:03 am

Cinque Terre

122.15 K

Cinque Terre

8

ಸಂಬಂಧಿತ ಸುದ್ದಿ