ಬೆಂಗಳೂರು: ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಪುತ್ರ ಸೇರಿದಂತೆ ಮೂವರನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ.
ಬಂಧಿತ ದರ್ಶನ್ ಲಮಾಣಿ ಡಾರ್ಕ್ ನೆಟ್ ಮೂಲಕ ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಹೇಮಂತ್ ಮತ್ತು ಸುನೀಶ್ ಎಂಬವರಿಗೆ ಆಶ್ರಯ ನೀಡಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಇದೇ ಜಾಲದ ಆರೋಪಿ ಸುಜಯ್ ಎಂಬಾತನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಆತನಿಂದ 500 ಗ್ರಾಂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಆದರೆ ಇನ್ನಿಬ್ಬರು ಆರೋಪಿಗಳಾದ ಸುನೀಶ್ ಹಾಗೂ ಹೇಮಂತ್ ತಲೆಮರೆಸಿಕೊಂಡಿದ್ದರು.
ಸುನೀಶ್ ಹಾಗೂ ಹೇಮಂತ್‌ಗೆ ತೀವ್ರ ಶೋಧ ನಡೆದಿದ್ದ ಸಿಸಿಬಿ ಪೊಲೀಸರು ಸೋಮವಾರ ಗೋವಾದಲ್ಲಿ ಬಂಧಿಸಿದ್ದಾರೆ. ಇವರ ಜೊತೆಗಿಗೆ ದರ್ಶನ್ ಲಮಾಣಿಯೂ ಇದ್ದರು. ಅವರನ್ನೂ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
PublicNext
09/11/2020 04:02 pm