ಇಸ್ಲಾಮಾಬಾದ್: ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಡ್ರಗ್ ತೆಗೆದುಕೊಂಡು ಕ್ರಿಕೆಟ್ ಆಡುತ್ತಿದ್ದ ಎಂದು ಪಾಕ್ ಮಾಜಿ ವೇಗದ ಬೌಲರ್ ಸರ್ಫಾರಾಜ್ ನವಾಜ್ ಆರೋಪಿಸಿದ್ದಾರೆ.
1970-80ರ ದಶಕದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ನವಾಜ್ ಹಾಗೂ ಇಮ್ರಾನ್ ಖಾನ್ ಅಗ್ರ ವೇಗದ ಬೌಲರ್ ಗಳಾಗಿದ್ದರು. ಇಮ್ರಾನ್ ಖಾನ್ ಕುರಿತು ನವಾಜ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಮ್ರಾನ್ ಡ್ರಗ್ ಸೇವಿಸುತ್ತಿದದ್ದು ನಾನಷ್ಟೇ ನೋಡಿಲ್ಲ.ನನ್ನ ಹೇಳಿಕೆ ಸುಳ್ಳು ಎಂದಾದರೆ ನನ್ನನ್ನು ನ್ಯಾಯಾಲಯಕ್ಕೆ ಎಳೆಯಲು ಅವರು ಸ್ವತಂತ್ರರು ಎಂದು ನವಾಜ್ ಹೇಳಿದ್ದಾರೆ.
1987ರಲ್ಲಿ ನಡೆದ ಘಟನೆ ಕುರಿತು ಮಾತನಾಡಿರುವ ಸರ್ಫಾರಾಜ್ ನವಾಜ್, ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಇಮ್ರಾನ್ ಖಾನ್ ಬೌಲಿಂಗ್ ಮಾಡಲು ಸಮಸ್ಯೆ ಎದುರಿಸಿದ್ದ. ಈ ವೇಳೆ ಇಸ್ಲಾಮಾಬಾದಿನ ಮನೆಗೆ ಬಂದ ಇಮ್ರಾನ್ ಗಾಂಜಾ ಸೇವಿಸಿದ್ದ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಕೇವಲ ಗಾಂಜಾ ಅಷ್ಟೇ ಅಲ್ಲದೇ ಕೊಕೇನ್ ಕೂಡ ತೆಗದುಕೊಳ್ಳುತ್ತಿದ್ದ. 1987 ರಲ್ಲಿ ಲಂಡನ್‍ನಲ್ಲಿ ನಡೆದ ಪಂದ್ಯದಲ್ಲಿ ಆತ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರಲಿಲ್ಲ. ಆ ವೇಳೆ ನನ್ನ ಮನೆಗೆ ಬಂದು ಅಲ್ಲಿಯೂ ಡ್ರಗ್ ಸೇವನೆ ಮಾಡಿದ್ದ. ಈ ವೇಳೆ ಮೊಹ್ಸಿನ್ ಖಾನ್, ಅಬ್ದುಲ್ ಖಾದಿರ್, ಸಲೀಮ್ ಮಲಿಕ್ ಕೂಡ ಜೊತೆಯಲ್ಲಿ ಆಗಮಿಸಿದ್ದರು ಎಂದು ನವಾಜ್ ಆರೋಪಿಸಿದ್ದಾರೆ.
PublicNext
04/11/2020 12:27 pm