ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರವನ್ನ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ತಮ್ಮ ಕಾರ್ಯಕರ್ತರಿಗೆ ತೋರಿಸಿದ್ದಾರೆ.
ಹೌದು. ಬೆಂಗಳೂರಿನ ಗರುಡಾ ಮಾಲ್ ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ನಲಪಾಡ್ ನೇತೃತ್ವದಲ್ಲಿ ಜೇಮ್ಸ್ ಚಿತ್ರವನ್ನ ನೋಡಿದ್ದಾರೆ.
ನಿಜ, ಪುನೀತ್ ರಾಜಕುಮಾರ್ ನಮ್ಮ ಹೆಮ್ಮೆ. ಅವರ ಈ ಚಿತ್ರವನ್ನ ಯಾರೂ ಮೊಬೈಲ್‌ನಲ್ಲಿ ಚಿತ್ರೀಕರಿಸಲೇಬೇಡಿ ಅಂತ ಕೂಡ ನಲಪಾಡ್ ಕಾರ್ಯಕರ್ತರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಭಾರತ್ ಮಾತಾ ಕೀ ಜೈ ಎಂದ ನಲಪಾಡ್, ಅಪ್ಪು ಬಾಸ್ ಗೂ ಜೈ ಅಂತಲೂ ಘೋಷಣೆ ಕೂಗಿ ಚಿತ್ರ ವೀಕ್ಷಿಸಿ ಖುಷಿಪಟ್ಟಿದ್ದಾರೆ.
PublicNext
17/03/2022 06:40 pm