ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಡಿ: ಸಿ.ಟಿ ರವಿ ಒತ್ತಾಯ

ಬೆಂಗಳೂರು: ರಾಜ್ಯ ಸರ್ಕಾರ ಪುನೀತ್ ಅಭಿನಯದ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಬೇಕು. ಆದರೆ ಇದಕ್ಕೂ 'ದಿ ಕಾಶ್ಮೀರಿ ಫೈಲ್ಸ್' ಚಿತ್ರಕ್ಕೂ ಹೋಲಿಕೆ ಮಾಡೋದು ಬೇಡ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನಿತ್ ರಾಜ್‌ಕುಮಾರ್ ಅವರ ಹುಟ್ಟು ಹಬ್ಬವನ್ನು ಅವರಿಲ್ಲದ ದುಃಖದಲ್ಲಿ ಆಚರಿಸಿಕೊಳ್ಳಬೇಕಿದೆ. ಪುನೀತ್ ರಾಜಕುಮಾರ್ ಒಬ್ಬ ಮಾದರಿ ವ್ಯಕ್ತಿ. ಅವರ ನಡೆಯನ್ನ ಅಭಿಮಾನಿಗಳು ಅನುಸರಿಸಿದ್ರೆ ಅದೇ ನಾವು ಅವರಿಗೆ ಕೊಡುವ ಗೌರವ. ಅವರ ನಡೆಯಲ್ಲಿ ನಾವೆಲ್ಲ ನಡೆಯಬೇಕಿದೆ ಎಂದರು.

ದಿ ಕಾಶ್ಮೀರ ಫೈಲ್ಸ್ ರೀತಿ ತೆರಿಗೆ ವಿನಾಯಿತಿ ಕೊಡುವ ವಿಚಾರವಾಗಿ ಮಾತನಾಡಿದ ಅವರು, ಎರಡು ಸಿನಿಮಾಗಳಿಗೆ ತಂದು ಹಾಕುವ ಕೆಲಸ ಬೇಡ. ಕಾಶ್ಮೀರ ಫೈಲ್ ಸಿನಿಮಾ ಅದು ಸತ್ಯಾಂಶಗಳ ಮೇಲೆ ತೆಗೆದಿರುವ ಸಿನಿಮಾ. ಇದು ಸಹ ಸಂದೇಶ ಇರುವ ಸಿನಿಮಾ. ಜೇಮ್ಸ್ ಚಿತ್ರಕ್ಕೂ ಸಹ ತೆರಿಗೆ ವಿನಾಯಿತಿ ಕೊಡಲಿ. ಆದ್ರೆ ಎರಡು ಸಿನಿಮಾಗಳನ್ನ ಹೋಲಿಕೆ ಮಾಡುವುದು ಬೇಡ ಎಂದು ಹೇಳಿದರು.

Edited By : Nagaraj Tulugeri
PublicNext

PublicNext

17/03/2022 02:19 pm

Cinque Terre

46.56 K

Cinque Terre

1