ಚಿಕ್ಕಬಳ್ಳಾಪುರ: ಹಿಜಾಬ್ ತೀರ್ಪು ಪ್ರಕಟ ಹಿನ್ನೆಲೆಯಲ್ಲಿಯೇ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ ಆಗಿದೆ. ಆದರೆ,ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಈ ನಿಯಮ ಉಲ್ಲಂಘಿಸಿದ್ದಾರೆಯೇ ಅನ್ನೋ ಪ್ರಶ್ನೆ ಈಗ ಎದ್ದಿದೆ.
ರಾಜ್ಯಾದ್ಯಂತ ಇಂದಿನಿಂದ ಮಾರ್ಚ್-20 ರವರೆಗೂ ನಿಷೇಧಾಜ್ಞೆ ಜಾರಿ ಇದೆ. ಆದರೆ ಮಾರ್ಚ್-19 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಆಗಲಗುರ್ಕಿಯಲ್ಲಿ ಟ್ರಿಪಲ್ ಆರ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಇದೆ. ದೊಡ್ಡ ಪ್ರಮಾಣದಲ್ಲಿಯೇ ಈ ಕಾರ್ಯಕ್ರಮ ಪ್ಲಾನ್ ಆಗಿದೆ. ಇದಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಆಗಮಿಸುತ್ತಿದ್ದಾರೆ.
ಅಲ್ಲಿಗೆ ರಾಜ್ಯದ ಮುಖ್ಯಮಂತ್ರಿಗಳೇ ನಿಯಮ ಉಲ್ಲಂಘನೆ ಮಾಡಿದಂತೆ ಅಲ್ಲವೇ.? ಅನ್ನೋ ಪ್ರಶ್ನೆ ಕೂಡ ಈಗ ಎದ್ದಿದೆ. ಹಿಜಾಬ್ ಭುಗಿಲೆದ್ದ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಕೂಡ ಇದೆ. ಈಗಾಗಲೇ ಇಲ್ಲಿಯ ಜಿಲ್ಲಾಧಿಕಾರಿ ಲತಾ ನಿಷೇಧಾಜ್ಞೆಗೆ ಆದೇಶ ಹೊರಡಿಸಿದ್ದಾರೆ.
PublicNext
15/03/2022 03:51 pm