ನವದೆಹಲಿ : ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಟ್ವೀಟ್ಟರ್ ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಪಂಜಾಬ್ ನಲ್ಲಿ ಜಯಗಳಿಸಿದ ಆಮ್ ಆದ್ಮಿ ಪಾರ್ಟಿ(ಎಎಪಿ) ಅಭ್ಯರ್ಥಿ ಭಗವಂತ್ ಮಾನ್ ಸಖತ್ ಟ್ರಂಡ್ ಆಗಿದ್ದಾರೆ.
ಹೌದು ಉಕ್ರೇನ್ ಅಧ್ಯಕ್ಷ ಬಲಿಷ್ಠ ರಾಷ್ಟ್ರ ರಷ್ಯಾ ಬಗ್ಗುಬಡಿಯಲು ತನ್ನ ನಿರಂತರ ಪ್ರಯತ್ನ ನಡೆಸುತ್ತಿದೆ. ಇದರ ಮಧ್ಯೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದಾರೆ. ಇತ್ತ ವಿಜಯಿತ ಭಗವಂತ್ ಮಾನ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದಾರೆ. ಇವರಿಬ್ಬರಿಗೂ ಏನು ಸಂಬಂಧ ಅಂತಾ ಹೆಚ್ಚು ಯೋಚನೆ ಮಾಡಬೇಡಿ ಇಲ್ಲಿದೆ ನೋಡಿ ಅಸಲಿ ವಿಚಾರ.
ಇವರಿಬ್ಬರಿಗೂ ಸಂಬಂಧ ಇಲ್ಲದಿದ್ದರೂ ಒಂದೇ ಹಿನ್ನೆಲೆಯಿಂದ ರಾಜಕೀಯಕ್ಕೆ ಪ್ರವೇಶಿಸಿರುವುದರಿಂದ ಇವರಿಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಹೋಲಿಕೆ ಮಾಡಲಾಗುತ್ತಿದೆ.
ಹೌದು, ರಷ್ಯಾ ಉಕ್ರೇನ್ ಯುದ್ಧಕ್ಕೂ ಮೊದಲು ಝೆಲೆನ್ಸ್ಕಿ ಹೆಸರನ್ನೂ ಕೇಳಿರದವರು ಆತ ಒಬ್ಬ ಹಾಸ್ಯ ನಟನಾಗಿ ಬಳಿಕ ರಾಜಕೀಯಕ್ಕೆ ಪ್ರವೇಶಿಸಿದ್ದ ವಿಷಯ ತಿಳಿದುಕೊಂಡರು. ಈ ವಿಚಾರವಾಗಿ ಭೀಕರ ಯುದ್ಧದ ಮಧ್ಯೆಯೂ ಝೆಲೆನ್ಸ್ಕಿ ಟ್ರೆಂಡ್ ಆಗಿದ್ದರು. ಇದೀಗ ಭಗವಂತ್ ಮಾನ್ ಅವರ ಸರದಿ.
ಭಗವಂತ್ ಮಾನ್ ಸಹ ರಾಜಕೀಯ ಸೇರುವ ಮೊದಲು ಪಂಜಾಬ್ ನ ಹಾಗೂ ರಾಷ್ಟ್ರೀಯ ಚ್ಯಾನೆಲ್ ಗಳಲ್ಲಿ ಹಾಸ್ಯ ಕಾರ್ಯಕ್ರಮವನ್ನು ನೀಡುತ್ತಿದ್ದರು. ಈ ಮೂಲಕ ಜನಪ್ರಿಯತೆ ಗಳಿಸಿ ಮಾನ್ ಬಳಿಕ ರಾಜಕೀಯ ಪ್ರವೇಶಿಸಿದರು. ಪಂಜಾಬ್ ನ ಚುನಾವಣೆಯಲ್ಲಿ ಭಗವಂತ್ ಮಾನ್ ಭರ್ಜರಿ ಗೆಲುವು ಸಾಧಿಸಿ ಪಂಜಾಬ್ನ ಝೆಲೆನ್ಸ್ಕಿ ಎನಿಸಿಕೊಂಡಿದ್ದಾರೆ.
PublicNext
11/03/2022 12:20 pm