ಹೈದ್ರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳ ಬಳಗದ ಕ್ರೇಜ್ ಭಾರಿ ಬಿಡಿ. ಪವನ್ ಎಲ್ಲೆ ಬಂದ್ರೂ ಸರಿಯೇ ಮುಗಿ ಬಿದ್ದು ಕಣ್ತುಂಬಿಕೊಳ್ತಾರೆ. ಅದರಂತೆ ನರಸಾಪುರಕ್ಕೆ ಪವನ್ ಕಲ್ಯಾಣ್ ಆಗಮಿಸಿದ್ದರು. ಇದೇ ವೇಳೆ ಅಭಿಮಾನಿಗಳಿಗಾಗಿಯೆ ಪವನ್ ಕಾರ್ ಮೇಲೂ ಹತ್ತಿರು. ಆಗಲೇ ನಡೆಯಿತು ನೋಡಿ ಈ ರಿಯಲ್ ಜಂಪ್.
ಹೌದು! ಜನ ಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಇಲ್ಲಿಯ ಮೀನುಗಾರಿಕೆ ಪ್ರಚಾರ ಸಭೆಗೆ ಆಗಮಿಸಿದ್ದರು. ಇದೇ ಸಮಯದಲ್ಲಿಯೇ ಅಭಿಮಾನಿಗಳಿಗಾಗಿಯೇ ಪವನ್ ಕಾರ್ ಮೇಲೆ ಹತ್ತಿದರು. ಇವರ ಮೇಲೆ ಅಪಾರ ಅಭಿಮಾನ ಹೊಂದಿರೋ ಅಭಿಮಾನಿಯೊಬ್ಬ ಕೂಡ ಕಾರ್ ಮೇಲೆ ಏರಿ ಪವನ್ ತಬ್ಬಿಕೊಳ್ಳಲು ಮುಂದಾಗಿಯೇ ಬಿಟ್ಟ.
ನಿಜ, ಇದೇ ಸಮಯದಲ್ಲಿಯೇ ಕಾರ್ ಮೇಲೆ ನಿಂತಿದ್ದ ಪವನ್ ಬ್ಯಾಲೆನ್ಸ್ ಕೂಡ ತಪ್ಪಿ ಬಿಟ್ಟಿದೆ. ಜಾರಿ ಬಿದ್ದರೂ
ಪವನ್ ಕಲ್ಯಾಣ್ ತಾಳ್ಮೆ ಕಳೆದು ಕೊಳ್ಳಲೇ ಇಲ್ಲ. ಸಮಾಧಾನವಾಗಿಯೇ ಇದ್ದರು. ಅದೇ ಈ ವೀಡಿಯೋನೆ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
PublicNext
21/02/2022 05:01 pm