ನವದೆಹಲಿ: ಗಾನಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಅವರು, 'ಲತಾ ದೀದಿ' ಎಂದು ಸಂಭೋಧಿಸಿದ್ದಾರೆ.
'ಸಹಾನುಭೂತಿ ವ್ಯಕ್ತಿತ್ವದ ಲತಾ ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಮುಂದಿನ ಪೀಳಿಗೆಗೆ ಭಾರತೀಯ ಸಂಸ್ಕೃತಿಯ ಅಗ್ರಮಾನ್ಯ ವ್ಯಕ್ತಿಯಾಗಿ ಉಳಿಯಲಿದ್ದಾರೆ. ಅವರ ಮಧುರ ಧ್ವನಿ, ಸಾಟಿಯಿಲ್ಲದ ಗಾಯನ ಪ್ರತಿಭೆ ಜನರ ನೆನಪಿನಲ್ಲಿ ಉಳಿಯಲಿದೆ ಎಂದಿದ್ದಾರೆ.
PublicNext
06/02/2022 11:58 am