ಬೆಂಗಳೂರು: ಕನ್ನಡದ ಹೆಸರಾಂತ ನಿರ್ದೇಶಕ ಎಸ್.ನಾರಾಯಣ ಈಗ ಹೊಸ ಹೆಜ್ಜೆ ಇಟ್ಟಂತಿದೆ. ಇಲ್ಲಿವರೆಗೂ ಸಿನಿಮಾದಲ್ಲಿಯೇ ಉಳಿದು ಅಲ್ಲಿಯೇ ಸಾಧನೆ ಮಾಡಿರೋ ನಿರ್ದೇಶಕ ಎಸ್.ನಾರಾಯಣ ರಾಜಕೀಯಕ್ಕೂ ಕಾಲಿಡೋ ಲಕ್ಷಣಗಳು ಕಂಡು ಬರುತ್ತಿವೆ.
ಎಸ್.ನಾರಾಯಣ ಅವರಿಗೆ ಕಾಂಗ್ರೆಸ್ ಪಕ್ಷದ ಆದರ್ಶ ಮತ್ತು ಸಿದ್ದಾಂತಗಳು ಇಷ್ಟ ಆಗಿವೆ. ಅದನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿಯೂ ಹೇಳಿಕೊಂಡಿದ್ದಾರೆ.
ಪಕ್ಷ ಸೇರುವ ಅಧಿಕೃತ ಪ್ರಕ್ರಿಯೆ ಒಂದೇ ಬಾಕಿ ಇದೆ. ಉಳಿದಂತೆ ಈಗಾಗಲೇ ಎಸ್.ನಾರಾಯಣ ಅವ್ರು ಡಿ.ಕೆ.ಶಿವಕುಮಾರ್ ಅವರನ್ನ ಭೇಟಿ ಆಗಿ ಬಂದಿದ್ದಾರೆ.ಅದಕ್ಕೆ ಸಾಕ್ಷಿ ಎಂಬಂತೆ ಸ್ವತಃ ಡಿಕೆಶಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮಿಬ್ಬರ ಫೋಟೋ ಹಂಚಿಕೊಂಡಿದ್ದಾರೆ.
PublicNext
30/01/2022 07:14 pm