ಮುಂಬೈ: ಸಿನಿಮಾ ಹಾಗೂ ಸಮಾಜಸೇವೆಯಲ್ಲಿ ಖ್ಯಾತಿ ಗಳಿಸಿರುವ ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಕಾಂಗ್ರೆಸ್ ಸೇರಿದ್ದಾರೆ. ಟ್ವೀಟ್ ಮೂಲಕ ತಂಗಿಗೆ ಶುಭ ಕೋರಿದ ನಟ ಸೋನು ಸೂದ್ ನನ್ನ ತಂಗಿ ಭವಿಷ್ಯ ಉಜ್ವಲವಾಗಿರಲಿ ಎಂದಿದ್ದಾರೆ.
ಈ ಮುಂಚೆ ಮಾಳವಿಕಾ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಬಗ್ಗೆ ರಾಜಕೀಯಾಸಕ್ತರು ಮಾತಾಡಿಕೊಳ್ತಿದ್ದರು. ಇದನ್ನು ಸೋನು ಸೂದ್ ಅಲ್ಲಗೆಳೆದಿದ್ದರು.
ಈಗ ತಂಗಿಗೆ ಶುಭ ಕೋರಿದ ಸೋನು ಸೂದ್, ನನಗೂ ಇದಕ್ಕೂ ಸಂಬಂಧವಿಲ್ಲ. ರಾಜಕೀಯದಲ್ಲಿ ಮುಂದುವರೆಯಬೇಕೆಂಬ ಆಸಕ್ತಿ ತಂಗಿಗೆ ಇತ್ತು. ಅದರಂತೆ ಆಕೆ ಮುಂದುವರೆದಿದ್ದಾಳೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
PublicNext
13/01/2022 10:58 pm