ಮಂಡ್ಯ: ಕುರುಕ್ಷೇತ್ರ ಚಿತ್ರದಲ್ಲಿ ನಾನು ಅಭಿಮನ್ಯು ಪಾತ್ರ ಮಾಡಿದ್ದೇನೆ. ಆದರೆ ಈಗ ರಾಜಕೀಯದಲ್ಲೂ ನಾನು ಅಭಿಮನ್ಯು ಆಗಿಬಿಟ್ಟಿದ್ದೇನೆ ಎಂದು ನಟ ನಿಖಿಲ್ ಕುಮಾರ್ ಸ್ವಾಮಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನಾನು ಸೋತು ಹೋದೆ. ಆದರೆ ಅದು ನನಗೆ ಇನ್ನೂ ನೋವು ಕೊಡುತ್ತಿದೆ. ಎದುರಾಳಿಗಳು ನನ್ನ ಸೋಲಿಸದರು.ರಾಜಕೀಯದಲ್ಲಿ ನನ್ನ ಅಭಿಮನ್ಯು ಮಾಡಿ ಬಿಟ್ಟರು ಅಂತಲೂ ಪರೋಕ್ಷವಾಗಿಯೇ ಎದುರಾಳಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯ ವಿಧಾನ ಪರಿಷತ್ ಪ್ರಚಾರದಲ್ಲಿ ಮಾತನಾಡಿದ್ದಾರೆ.ಈ ಹಿಂದಿನ ಚುನಾವಣೆಯಲ್ಲಿ ನಾನು ಸೋತಿದ್ದೇನೆ.ಆದರೆ ಎಂಎಲ್‌ಸಿ ಚುನಾವಣೆಯಲ್ಲಿ ಅಪ್ಪಾಜಿ ಗೌಡರನ್ನ ಗೆಲ್ಲಿಸುವ ಹೊಣೆ ನನ್ನದಾಗಿದೆ. ಎಲ್ಲರೂ ಸಹಕಾರಿಸಿ ಅವರನ್ನ ಗೆಲ್ಲಿಸೋಣ ಅಂತಲೇ ಹೇಳಿದ್ದಾರೆ.
PublicNext
29/11/2021 06:51 pm