ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

6 ಕೋಟಿ ಕನ್ನಡಿಗರ ಪರವಾಗಿ ನಾನು 'ಅಪ್ಪು'ಗೆ ಮುತ್ತು ಕೊಟ್ಟೆ: ಸಿಎಂ

ಬೆಂಗಳೂರು: ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ಸಿಎಂ ಆರು ಕೋಟಿ ಕನ್ನಡಿಗರ ಪರವಾಗಿ ಪುನೀತ್‌ಗೆ ಅಂತಿಮ ಮುತ್ತು ಕೊಟ್ಟಿದ್ದೇನೆ ಎಂದಿದ್ದಾರೆ.

ನಟನೆ, ಸ್ಥಿತಿವಂತಿಕೆಯೊಂದಿಗೆ ನಯ-ವಿನಯ ಪುನೀತ್‌ ರಾಜ್‌ಕುಮಾರ್‌ ಅವರಲ್ಲಿತ್ತು. ಪರೋಪಕಾರವನ್ನು ಮಾಡಿಯೂ ಮಾಡದಂತೆ ಇದ್ದವರು ಪುನೀತ್. ಶರಣರನ್ನು ಮರಣದಲ್ಲಿ ನೋಡಿ ಎನ್ನುತ್ತಾರೆ ದೊಡ್ಡವರು. ಮರಣದ ನಂತರ ಜನರು ಪುನೀತ್‌ ಬಗ್ಗೆ ತಮ್ಮ ಭಾವನೆ, ಅನುಭವವನ್ನು ವ್ಯಕ್ತಪಡಿಸಿದ್ದು ಆತನ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಅಪ್ಪುವಿನ ಪರಿಪೂರ್ಣ ವ್ಯಕ್ತಿತ್ವ ಕನ್ನಡ ನಾಡಿಗೆ ಪರಿಚಯವಾಗಿದೆ ಎಂದರು.

ಪುನೀತ್‌ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್‌ ರಾಜ್‌ಕುಮಾರ್‌ ಒಂದು ಮುತ್ತು. ಬಾಲಕನಿಂದಲೂ ಆತ ಅದ್ಭುತ ನಟ. ತಂದೆಯಂತೆಯೇ ನಯ-ವಿನಯ ರೂಢಿಸಿಕೊಂಡು ಬೆಳೆದರು ಅಪ್ಪು. ಅವರ ಅಂತಿಮ ದರ್ಶನವನ್ನೂ ಅಭಿಮಾನಿಗಳು ಯಾವುದೇ ತೊಂದರೆಯಾಗದಂತೆ ನಡೆಸಿಕೊಡಲು ಅನುವು ಮಾಡಿಕೊಟ್ಟರು. ತನ್ನ ನಟನೆಯ ಮೂಲಕವೇ ಆರು ಕೋಟಿ ಜನರ ಮನಸ್ಸನ್ನು ಆಕರ್ಷಿಸಿದ್ದ ಅಪ್ಪು. ಅಭಿಮಾನಿಗಳ ಪರವಾಗಿ ನಾನು ಪುನೀತ್‌ ಹಣೆಗೆ ಮುತ್ತುಕೊಟ್ಟೆ ಎಂದು ನೆನೆದರು.

Edited By : Nagaraj Tulugeri
PublicNext

PublicNext

16/11/2021 07:48 pm

Cinque Terre

40.96 K

Cinque Terre

9

ಸಂಬಂಧಿತ ಸುದ್ದಿ