ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿ ಇಂದಿಗೆ 12 ದಿನ. ಅಪ್ಪು ಮನೆಗೆ ಅನೇಕ ನಟರು ಭೇಟಿ ನೀಡಿದ್ದಾರೆ. ಇಂದಿಗೂ ಭೇಟಿ ನೀಡುತ್ತಲೇ ಇದ್ದಾರೆ. ಇಂದು ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಅಪ್ಪು ನಿಧನರಾದ ಸುದ್ದಿ ಕೇಳಿ ಆಘಾತಗೊಂಡ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರು ಶಿವರಾಜ್ ಕುಮಾರ್ ಅವರಿಗೆ ಭಾವನಾತ್ಮಕ ಪತ್ರ ಬರೆದು, ಅಪ್ಪು ನಿಧನಕ್ಕೆ ಸಂತಾಪ ಸೂಚಿಸಿದ್ದರು.
‘ನಮ್ಮ ತಂದೆ ಕರುಣಾನಿಧಿ ಅವರು ಮೃತಪಟ್ಟ ಸಂದರ್ಭದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮ ಗೋಪಾಲಪುರಂ ನಿವಾಸಕ್ಕೆ ಬಂದು ನಿಮ್ಮ ಕುಟುಂಬದ ಪರವಾಗಿ ನಮಗೆ ಸಾಂತ್ವನ ಹೇಳಿದ್ದರು. ಇದು ನಮ್ಮ ಹೃದಯದಲ್ಲಿ ಇನ್ನೂ ಹಸಿರಾಗಿಯೇ ಇದೆ. ಇಂತಹ ಮಹಾನ್ ವ್ಯಕ್ತಿತ್ವವುಳ್ಳ ಅಪ್ಪು ಅವರನ್ನ ಕಳೆದುಕೊಂಡ ದುಃಖದಲ್ಲಿರುವ ನಿಮ್ಮ ಕುಟುಂಬಕ್ಕೂ ಮತ್ತು ಅಪ್ಪು ಅವರನ್ನು ಪ್ರೀತಿಸುವ ಅಭಿಮಾನಿಗಳಿಗೆ ನಾನು ನೋವಿನಿಂದಲೇ ಸಾಂತ್ವನ ಹೇಳುತ್ತಿರುವೆ. ಪುನೀತ್ ರ ನಿಧನ ಸುದ್ದಿ ಕೇಳಿ ನನಗೆ ತುಂಬಾ ವೇದನೆ ಆಯ್ತು. ನಮ್ಮ ಹಾಗೂ ರಾಜ್ ಕುಟುಂಬದ ನಡುವೆ ಹಲವು ವರ್ಷಗಳ ನಂಟು ಇದೆ. ಪುನೀತ್ ನಿಧನ ನನಗೆ ವೈಯಕ್ತಿಕವಾಗಿ ತುಂಬಾ ನಷ್ಟವನ್ನುಂಟು ಮಾಡಿದೆ’ ಎಂದಿದ್ದಾರೆ.
PublicNext
09/11/2021 05:20 pm