ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುನೀತ್ ಅಂತಿಮ ದರ್ಶನಕ್ಕೆ 25 ಲಕ್ಷಕ್ಕೂ ಹೆಚ್ಚು ಜನ ಸಾಗರ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿಯೆ ಇದ್ದಾರೆ. ಪುನೀತ್ ನಿಧನದ ದಿನದಿಂದ ಹಿಡಿದು,ಅಂತ್ಯ ಕ್ರಿಯೆಯ ದಿನದವರೆಗೂ ಹೆಚ್ಚು ಕಡಿಮೆ 25 ಲಕ್ಷ ಜನ ಅಭಿಮಾನಿಗಳು ಬಂದು ಪುನೀತ್ ದರ್ಶನ ಪಡೆದಿದ್ದಾರೆ. ಈ ಸಮಯದಲ್ಲಿ

ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿಗಳೂ ಕೂಡ ತಮ್ಮ ಕಾರ್ಯವನ್ನ ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ರಾಜ್ಯದ ಲಕ್ಷ ಲಕ್ಷ ಜನ ಪುನೀತ್ ನಿಧನದ ಸುದ್ದಿ ಕೇಳಿ, ಬೆಂಗಳೂರಿನ ಕಡೆಗೆ ಹರಿದು ಬಂದರು.ಇದರಿಂದ ಎರಡು ರಾತ್ರಿ,ಎರಡು ಹಗಲು ಜನ ನಿರಂತರವಾಗಿಯೇ ಇಲ್ಲಿಗೆ ಆಗಮಿಸುತ್ತಿದ್ದರು. ಈ ಸಮಯದಲ್ಲಿ ಜನ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಸಮರ್ಥವಾಗಿಯೇ ಕೆಲಸ ನಿರ್ವಹಿಸಿದೆ. ಯಾವುದೇ ರೀತಿಯ ಘಟನೆಗಳು ಜರುಗದಂತೆ ಕೆಲಸ ಮಾಡಿದೆ ಎಂದು ಹೇಳುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ಇಡೀ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Edited By :
PublicNext

PublicNext

31/10/2021 01:59 pm

Cinque Terre

104.26 K

Cinque Terre

19

ಸಂಬಂಧಿತ ಸುದ್ದಿ