ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಪುತ್ರ ಆರ್ಯನ್ ಖಾನ್ ಬಂಧನ ಇಡೀ ಇಂಡಸ್ಟ್ರೀಯಲ್ಲಿ ಬೇರೆ ಸಂಚಲನ ಮೂಡಿಸಿದೆ.ಸೂಪರ್ ಸ್ಟಾರ್ ಪರವಾಗಿಯೆ ಇಂಡ್ಟ್ರೀಯ ಎಲ್ಲರೂ ಮಾತ್ ಆಡ್ತಿದ್ದಾರೆ. ನಟಿ ರವೀನಾ ಟಂಡನ್ ಅಂತೂ ರಾಜಕಾರಣಿಗಳ ಜನ್ಮ ಜಾಲಾಡಿಬಿಟ್ಟಿದ್ದಾರೆ.
ಒಂದ್ ಕಾಲದ ನಾಯಕಿ ನಟಿ ರವೀನಾ ಟಂಡನ್ ಸಿಟ್ಟಿಗೆದ್ದು ಟ್ವೀಟ್ ಮಾಡಿದ್ದಾರೆ. ಆರ್ಯನ್ ಖಾನ್ ನ್ಯಾಯಾಂಗ ಬಂಧನದ ಬಳಿಕ ರವೀನಾ ಟ್ವೀಟ್ ಮಾಡಿ,ನಾಚಿಗೇಡಿತನದ ರಾಜಕೀಯ ಇಲ್ಲಿ ನಡೀತಿದೆ. ಆರ್ಯನ್ ಖಾನ್
ಇನ್ನೂ ಚಿಕ್ಕ ಹುಡುಗ.ಆತನ ಜೀವನದ ಜೊತೆಗೆ ಆಟವಾಡಲಾಗುತ್ತಿದೆ. ಮುಂದ್ರಾ ಹೆರಾಯಿನ್ ಕೇಸ್ ಅಲ್ಲಿ ಎಷ್ಟು ಜನಕ್ಕೆ ಶಿಕ್ಷೆ ಆಗಿದೆ. ಎಷ್ಟು ಜನ ಜೈಲಿಗೆ ಹೋಗಿದ್ದಾರೆ ಹೇಳಿ ಅಂತ ಪ್ರಶ್ನೆ ಮಾಡಿ, ಆರ್ಯನ್ ಬಂಧನವನ್ನ ಖಂಡಿಸಿದ್ದಾರೆ ರವೀನಾ ಟಂಡನ್.
PublicNext
08/10/2021 03:18 pm