ಬೆಂಗಳೂರು: ನಟ ದರ್ಶನ್ ಜೈಲಿಗೆ ಹೋಗಿ ಬಂದ ಮೇಲೆ ಸಾರಥಿ ಸಿನಿಮಾ ರಿಲೀಸ್ ಆಯ್ತು. ಆದರೂ ಸಿನಿಮಾ ಹಿಟ್ ಆಯ್ತು. ನಮ್ಮಲ್ಲಿ ಒಂದು ರೀತಿಯ ರಾಜಕೀಯ ಇದ್ದರೆ ಸಿನಿಮಾದಲ್ಲಿ ಮತ್ತೊಂದು ರೀತಿಯ ರಾಜಕೀಯ ಇದೆ. ಏನು ಮಾಡೋಕೆ ಆಗಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೃಷಿ ಇಲಾಖೆ ರಾಯಭಾರಿ ಸ್ಥಾನದಿಂದ ನಟ ದರ್ಶನ್ ಬದಲಾವಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಯೊಬ್ಬರ ವೈಯಕ್ತಿಕ ಜೀವನವನ್ನು ಸಾರ್ವಜನಿಕವಾಗಿ ಪರಿಗಣಿಸಲು ಆಗುವುದಿಲ್ಲ. ದರ್ಶನ್ ಅವರಿಗೆ ಕೋರ್ಟ್‌ನಲ್ಲಿ ಏನಾದರೂ ಶಿಕ್ಷೆ ಆಗಿದ್ಯಾ? ವೈಯಕ್ತಿಕ ಜೀವನಕ್ಕಾಗಿ ಜೈಲಿಗೆ ಹೋಗಿ ಬಂದಿದ್ದೇ ಬೇರೆ. ಹೋಗಿ ಬಂದ ಮೇಲೆ ಗಂಡ-ಹೆಂಡತಿ ಚೆನ್ನಾಗಿದ್ದಾರೆ. ಜೈಲಿಗೆ ಹೋಗಿ ಬಂದ ಮೇಲೆ ದರ್ಶನ್ ಸಾರಥಿ ಚಿತ್ರ ಸೂಪರ್ ಡೂಪರ್ ಆಯ್ತು, ನಂತರ ಅವರ ಅದೃಷ್ಟವೇ ಚೇಂಜ್ ಆಯ್ತು. ಹೀಗಾಗಿ ಕೃಷಿ ಇಲಾಖೆ ರಾಯಭಾರತ್ವಕ್ಕೂ ಇದಕ್ಕೂ ಲಿಂಕ್ ಮಾಡೋದು ಸರಿಯಲ್ಲ ಎಂದಿದ್ದಾರೆ.
PublicNext
04/10/2021 07:10 pm