ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರ್ಸನಲ್ ಟಾರ್ಗೆಟ್ ಮಾಡುವವರಿಗೆ ನಾನೇನು ಅಂತ ತೋರಿಸ್ತೀನಿ: ರಾಂಗ್ ಆದ ರಾಕ್ಲೈನ್

ಬೆಂಗಳೂರು: ಬಿಬಿಎಂಪಿಗೆ ತಪ್ಪು ಲೆಕ್ಕ ನೀಡಿ ತೆರಿಗೆ ವಂಚನೆ ಮಾಡಿದ ಆರೋಪ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮೇಲೆ ಕೇಳಿ ಬಂದಿದೆ. ಈ ಬಗ್ಗೆ ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಆರೋಪಿಸಿದ್ದರು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಈ ರಮೇಶ್ ಎನ್ನುವವರು ಯಾರು ಎಂಬುದೇ ನನಗೆ ಗೊತ್ತಿಲ್ಲ. ಆತ ಯಾರೇ ಇದ್ದರೂ ನನ್ನನ್ನು ಈ ಮಟ್ಟಕ್ಕೆ ಪರ್ಸನಲ್ ಆಗಿ ಟಾರ್ಗೆಟ್ ಮಾಡ್ತಿದ್ದಾರೆ ಅಂದ್ರೆ ಅವರಿಗೆ ನನ್ನ ಕೆಪ್ಯಾಸಿಟಿ ಏನು ಅಂತ ತೋರಿಸ್ತೀನಿ ಎಂದಿದ್ದಾರೆ.

ಅಂದ್ ಹಾಗೆ ರಾಜ್ ಕುಮಾರ್ ಅವರ ಹೆಸರು ಹೇಳಿಕೊಂಡು ರಮೇಶ್ ಎನ್ನುವ ಹೆಸರಿನವರೇ ಚಂದಾ ಕೇಳಲು ಬಂದಿದ್ದರು‌. ಆ ರಮೇಶ್ ಹೆಸರಿನವರು ಇವರಾ ಅಥವಾ ಬೇರೇನಾ ಎಂಬುದು ಗೊತ್ತಾಗಬೇಕಿದೆ‌ ಎಂದು ರಾಕ್ಲೈನ್ ವೆಂಕಟೇಶ್ ಟಾಂಗ್ ಕೊಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

14/08/2021 11:49 am

Cinque Terre

74.88 K

Cinque Terre

2