ಬೆಂಗಳೂರು: ಬಿಗ್ ಬಾಸ್ ಸೀಸನ್ 6ಗೆ ನನಗೆ ಆಹ್ವಾನ ನೀಡಿದ್ದರು. ಬಿಗ್ ಬಾಸ್ ಗೆ ಹೋಗುವುದಕ್ಕೆ ನಾನು ಒಪ್ಪಿಕೊಂಡಿದ್ದೆ. ಆದ್ರೆ ಆಗ ಆರೋಗ್ಯ ಸಮಸ್ಯೆಯಿಂದ ಹೋಗಲು ಆಗಿರಲಿಲ್ಲ. ಈಗ ಕೆಲವು ಸ್ನೇಹಿತರು ಹೋಗ್ತೀರಾ ಅಂತಾ ಹೇಳ್ತಿದ್ದಾರೆ. ಬಿಗ್ ಬಾಸ್ ಗೆ ಹೋಗುವುದಕ್ಕೆ ನನಗೆ ಆಸೆಯಿತ್ತು. ವಿಶೇಷ ಆಹ್ವಾನಿತರಾಗಿ ಕರೆದರೆ 3-4 ದಿನಕ್ಕೆ ಹೋಗುವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಜನರಿಗೆ ಎಲ್ಲಾ ಅರ್ಥ ಆಗುತ್ತಿದ್ದರೂ ರಾಜಕಾರಣ ಅರ್ಥ ಆಗುತ್ತಿಲ್ಲ. ಆ ಮನೆಯಲ್ಲಿ ಯುವಕರು, ಸಿನಿಮಾದವರು, ಗಂಡು ಮಕ್ಕಳು, ಹೆಣ್ಣು ಮಕ್ಕಳು, ಸಿನಿಮಾದವರು ಇದ್ದಾರೆ. ಅಲ್ಲಿ ನಾನು ರಾಜಕಾರಣದ ಸ್ಪಾರ್ಕ್ ಹಚ್ಚಬಹುದು. ಅವಕಾಶ ಸಿಕ್ಕಿದರೆ ಖಂಡಿತ ಬಿಗ್ ಬಾಸ್ ಮನೆಗೆ ಹೋಗುತ್ತೇನೆ ಎಂದಿದ್ದಾರೆ ಹೆಚ್.ವಿಶ್ವನಾಥ್.
PublicNext
01/03/2021 04:31 pm