ಸ್ಯಾಂಡಲ್ ವುಡ್ ನಟ ಹಾಗೂ ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಮಗಳ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿದೆ.
ನಿನ್ನೆ ಲಾವಣ್ಯ ಹಾಗೂ ವಿಕ್ರಮಾದಿತ್ಯ ಉಂಗುರ ಬದಲಿಸಿಕೊಂಡರು. ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡೂ ಕಡೆಯ ಕುಟುಂಬಸ್ಥರು ಭಾಗಿಯಾಗಿ ಸಂಭ್ರಮಿಸಿದ್ದಾರೆ.
ಇನ್ನು ಕುಮಾರ್ ಬಂಗಾರಪ್ಪ ಅವರು ಮಗಳ ಕಾರ್ಯಕ್ರಮದ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರ ಆಶಿರ್ವಾದ ಬಯಸುತ್ತೇನೆ. ನಮ್ಮ ಕುಟುಂಬದ ಮೇಲೆ ಹೇಗೆ ಅಭಿಮಾನ ಪ್ರೀತಿ ಇದೆಯೋ ಹಾಗೆಯೇ ಈ ನವ ಜೋಡಿಗಳ ಮೇಲೆ ನಿಮ್ಮೆಲ್ಲರ ಆಶಿರ್ವಾದ ಹಾಗೂ ಹಾರೈಕೆಗಳು ಸದಾ ಇರಲಿ.. ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಹಾಗೂ ಹಿತೈಷಿಗಳು ನವಜೋಡಿಗೆ ಶುಭಾಶಯ ಕೋರಿದ್ದಾರೆ.
PublicNext
26/02/2021 12:29 pm