ಬೆಂಗಳೂರು: ನಾಲಿಗೆ ಹರಿಬಿಟ್ಟ ಶಾಂತಿನಗರ ಶಾಸಕ ಹ್ಯಾರಿಸ್ ಅಣ್ಣಾವ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಹೌದು. ಡಾ. ರಾಜ್ ಕುಮಾರ್ ಅವರಿಗೆ ಹ್ಯಾರಿಸ್ ಅಪಮಾನ ಮಾಡಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಹ್ಯಾರಿಸ್ ಹೇಳಿದ್ದೇನು..?
ಪ್ರತಿಮೆ ಇಡುವುದೇ ದೊಡ್ಡ ಕತೆ, ಅದರಲ್ಲಿ ಮೇಲೆ ಶೆಡ್ ಬೇರೆ ಮಾಡಿಕೊಡುವುದಕ್ಕೆ ಆಗುತ್ತಾ..?, ಅಲ್ಲದೆ ಅದರ ಮೇಲೆ ಪ್ರೊಟೆಕ್ಷನ್ ಏನ್ ಬೇಕಾಗಿಲ್ಲ. ಓಪನ್ ಇಡಿ ಅವರ್ಯಾರೋ ರಾಜ್ ಕುಮಾರ್ ಗೆ ಅಂತ ಮಾಡಿರ್ತಾರೆ, ಅದನ್ನು ತೆಗಿಬೇಕು. ಸ್ಟ್ಯಾಚ್ಯುಗೆಲ್ಲಾ ಕವರ್ ಮಾಡಿ ಮನೆಯಲ್ಲಿ ಇಟ್ಟಿದ್ರೆ ಆಗಿರ್ತಿತ್ತು. ರೋಡಲ್ಲಿ ಯಾಕೆ ಇಡುತ್ತಾರೆ ಅಲ್ವಾ, ಯಾರ್ ಕೇಳಿರುವವರು.? ಬುದ್ಧಿ ಇಲ್ಲ ಏನ್ ಮಾಡೊದು, ಏನಾದ್ರು ಹೇಳಿದ್ರೆ ಬೇರೆ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ. ನಾನು ಅವಾಗ್ಲು ಹೇಳಿದೆ ಬೇಡಪ್ಪ ಅಂತ. ಆವಾಗ ಸ್ವಲ್ಪ ಕಲೆಕ್ಷನ್ ಮಾಡಿದ್ರು. ರಾಜ್ ಕುಮಾರ್ ಅವರೇ ಇದ್ದಾರೆ, ಇನ್ನು ಬೋರ್ಡ್ ಏನಕ್ಕೆ ಎಂದು ಹ್ಯಾರಿಸ್ ಪ್ರಶ್ನೆ ಮಾಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದು, ಅಣ್ಣಾವ್ರ ಅಭಿಮಾನಿಗಳು ಹ್ಯಾರಿಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
PublicNext
17/02/2021 06:12 pm