ಮುಂಬೈ:ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಅಕ್ರಮ ವಸತಿ ಕಟ್ಟಡ ನಿರ್ಮಾಣ ಆರೋಪ ಕೇಳಿ ಬಂದಿರುವ ಸಮಯದಲ್ಲೇ, ಅವರು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಹಲವು ಅನುಮಾನಗಳನ್ನು ಮೂಡಿಸಿದೆ.
ಇತ್ತೀಚೆಗಷ್ಟೇ, ಅನುಮತಿಯಿಲ್ಲದೆ ವಸತಿ ಗೃಹವನ್ನು ಹೋಟೆಲ್ ಆಗಿ ಪರಿವರ್ತಿಸಿದ ಆರೋಪದಡಿ ಸೋನು ಸೂದ್ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ದೂರು ದಾಖಲಿಸಿತ್ತು.
ಬಿಎಂಸಿಯು ಕಟ್ಟಡವನ್ನು ಪರಿಶೀಲಿಸಿ, ಕಳೆದ ಅಕ್ಟೋಬರ್ನಲ್ಲಿ ನಟನಿಗೆ ನೋಟಿಸ್ ನೀಡಿತ್ತು. ಆದರೂ ಅವರು ಅನಧಿಕೃತವಾಗಿ ಕಟ್ಟಡದ ನಿರ್ಮಾಣವನ್ನು ಮುಂದುವರಿಸಿದ್ದಾರೆ ಎಂದು ದೂರಿನಲ್ಲಿ ಬಿಎಂಸಿ ಉಲ್ಲೇಖಿಸಿದೆ. ಬಿಎಂಸಿಯ ನೋಟಿಸ್ ಪ್ರಶ್ನಿಸಿ ನಟ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
PublicNext
14/01/2021 09:42 am