ಮುಂಬೈ: ಬಾಲಿವುಡ್ ಡ್ರಗ್ ಮಾಫಿಯಾ ಪ್ರಕರಣದ ಸಂಬಂಧ ಎನ್‌ಸಿಬಿ ನಟಿ ದೀಪಿಕಾ ಪಡುಕೋಣೆ ಅವರಿಗೆ ನೋಟೀಸ್ ನೀಡಿದೆ. ಈ ಮಧ್ಯೆ ದೀಪಿಕಾ ಸಂದರ್ಶನದ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.
'ದೇಶಕ್ಕಾಗಿ ರಾಹುಲ್ ಗಾಂಧಿ ಅವರು ಏನು ಮಾಡುತ್ತಿದ್ದಾರೋ ಅದು ನಿಜಕ್ಕೂ ಒಂದು ಕ್ಲಾಸಿಕ್ ಉದಾಹರಣೆ. ಒಂದು ದಿನ ಅವರು ಪ್ರಧಾನಿಯಾಗುತ್ತಾರೆ. ಯುವ ಜನತೆ ಜೊತೆ ರಾಹುಲ್ ಬೇಗ ಕನೆಕ್ಟ್ ಆಗುತ್ತಾರೆ. ಅವರ ಆಲೋಚನೆ-ವಿಚಾರಗಳೆಲ್ಲವೂ ಸಾಂಪ್ರದಾಯಿಕವಾಗಿವೆ. ಅದರ ಜೊತೆಗೆ ಭವಿಷ್ಯದ ಬಗೆಗೆ ಮುಂದಾಲೋಚನೆ ಹೊಂದಿದ್ದಾರೆ' ಎಂದು ದೀಪಿಕಾ ಸಂದರ್ಶನಲ್ಲಿ ಹೇಳಿದ್ದರು. ಈ ವಿಡಿಯೋವನ್ನು ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
PublicNext
28/09/2020 10:41 pm