ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿನಿಮಾದಲ್ಲಿ ಸ್ಮೋಕಿಂಗ್, ಡ್ರಿಂಕಿಂಗ್ ತಪ್ಪು ಅಂತಾದ್ರೆ ಅದರಿಂದ ತೆರಿಗೆ ಸರಿನಾ?: ಉಪೇಂದ್ರ ಪ್ರಶ್ನೆ

ಬೆಂಗಳೂರು: "ಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋದು ತಪ್ಪು, ಕುಡಿಯೋದು ತಪ್ಪು, ಜೂಜಿಗೆ ಜಾಹೀರಾತು ನೀಡೋದು ತಪ್ಪು. ಆದ್ರೆ ಇವುಗಳಿಂದ ಬರುವ ತೆರಿಗೆ ಹಣಕ್ಕಾಗಿ ಇದೆಲ್ಲದಕ್ಕೂ ಅನುಮತಿ ಕೊಟ್ಟಿರುವ ಸರ್ಕಾರ ಮಾತ್ರ ಸರಿ‌."

ಈ ರೀತಿ ನಟ ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್‌ಕುಮಾರ್ ತಂಬಾಕು ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಕ್ಷಮೆ ಕೇಳಿದ್ದರು‌. ಹಾಗೂ ಇನ್ನೆಂದೂ ನಾನು ಆ ರೀತಿಯ ಯಾವುದೇ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಟ ಹಾಗೂ ನಿರ್ದೇಶಕ ಉಪೇಂದ್ರ ಈ ರೀತಿ ಬರೆದಿರುವುದು ಚರ್ಚಾಸ್ಪದವಾಗಿದೆ.

'ಶ್..ಯಾರೂ ಮಾತನಾಡಬಾರದು! ನಾಯಕ ಸಂಸ್ಕೃತಿಯ ರಾಜಕೀಯ ಗುಂಗಿನ‌ ಸಮಾಜದಲ್ಲಿ ಯಾವತ್ತೂ ಅಪ್ಪ ಸರಿ. ಮಕ್ಕಳು ತಪ್ಪು' ಎಂದು ಬರೆದಿರುವ ಉಪೇಂದ್ರ ಸದ್ಯದ ಸ್ಥಿತಿಯನ್ನು ಈ ರೀತಿ ವಿಶ್ಲೇಷಿಸಿದ್ದಾರೆ.

Edited By : Nagaraj Tulugeri
PublicNext

PublicNext

22/04/2022 04:37 pm

Cinque Terre

95.61 K

Cinque Terre

15

ಸಂಬಂಧಿತ ಸುದ್ದಿ