ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುತೂಹಲ ಕೆರಳಿಸಿದ ಯೋಗಿ- ಅಕ್ಷಯ್​ ಕುಮಾರ್ ಭೇಟಿ: ಬಾಲಿವುಡ್‌ ಯುಪಿಗೆ ಶಿಫ್ಟ್‌?

ಮುಂಬೈ: ಮಹಾನಗರಿ ಮುಂಬೈನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಾಲಿವುಡ್‌ ನಟ ಅಕ್ಷಯ್​ ಕುಮಾರ್​ ಮಂಗಳವಾರ ಭೇಟಿಯಾಗಿರುವುದು ಭಾರೀ ಕುತೂಹಲ ಮೂಡಿಸಿದೆ.

ಯೋಗಿ ಆದಿತ್ಯನಾಥ ಅವರು ಬಾಲಿವುಡ್‌ ಅನ್ನು ಮುಂಬೈನಿಂದ ಉತ್ತರ ಪ್ರದೇಶಕ್ಕೆ ಶಿಫ್ಟ್​ ಮಾಡೋ ಹುನ್ನಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸುತ್ತಿರುವ ಬೆನ್ನಲ್ಲೇ ಈ ಭೇಟಿ ನಡೆದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಕ್ಷಯ್ ಕುಮಾರ್‌ ಅವರೊಂದಿಗೆ ಚರ್ಚೆ ನಡೆಸುತ್ತಿರುವ ಫೋಟೋಗಳನ್ನು ಟ್ವಿಟರ್ ಮಾಡಿರುವ ಯೋಗಿ ಆದಿತ್ಯನಾಥ್, ''ಮುಂಬೈನಲ್ಲಿ ನಟ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾದೆ. ಅವರೊಂದಿಗೆ ಚಿತ್ರರಂಗದ ವಿವಿಧ ಆಯಾಮಾಗಳ ಕುರಿತು ಚರ್ಚೆ ನಡೆಸಿದೆ. ಕೆಲಸದ ಬಗೆಗಿನ ಅವರ ತಿಳಿವಳಿಕೆ, ಸಮರ್ಪಣಭಾವ ಮತ್ತು ರಚನಾತ್ಮಕತೆ ಇಂದಿನ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ'' ಎಂದು ಬರೆದುಕೊಂಡಿದ್ದಾರೆ.

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲವಾರು ರೀತಿಯಲ್ಲಿ ಸುದ್ದಿಯನ್ನು ಮಾಡುತ್ತಿದೆ. ಉತ್ತರ ಪ್ರದೇಶದಲ್ಲಿ ದೇಶದ ಅತ್ಯಂತ ದೊಡ್ಡ ಫಿಲ್ಮ್ ಸಿಟಿಯನ್ನು ನಿರ್ಮಾಣ ಮಾಡುವ ಚರ್ಚೆ ಎಲ್ಲೆಡೆ ಹರಿದಾಡಿತ್ತು. ಈ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ ಅವರು ಪ್ರಮುಖ ನಟ, ನಿರ್ದೇಶಕರನ್ನು ಭೇಟಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ.

Edited By : Vijay Kumar
PublicNext

PublicNext

02/12/2020 05:30 pm

Cinque Terre

81.33 K

Cinque Terre

7

ಸಂಬಂಧಿತ ಸುದ್ದಿ