ಮೈಸೂರು: ಸಿಬಿಐ ಅಧಿಕಾರಿಗಳು ಬಿಜೆಪಿಯವರ ಮೇಲೆ ಯಾಕೆ ರೊಟೀನ್ ದಾಳಿ ಮಾಡುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಬಿಐ ಅಧಿಕಾರಿಗಳು ಯಾಕೆ ಉಪಚುನಾವಣೆ ಸಂದರ್ಭದಲ್ಲಿಯೇ ದಾಳಿ ಮಾಡಬೇಕು. ಯಾಕೆ ಕಾಂಗ್ರೆಸ್ ನಾಯಕರನ್ನ ಟಾರ್ಗೆಟ್ ಮಾಡಬೇಕು. ಸುಮ್ಮನೆ ರಾಜಕೀಯ ಕಾರಣಕ್ಕಾಗಿ ದಾಳಿ ಮಾಡುತ್ತಿದ್ದಾರೆ. ಆದರೆ ಹೇಳುವುದು ಮಾತ್ರ ವೇದಾಂತ.
ಇದು ರಾಜಕೀಯ ದುರುದ್ದೇಶದಿಂದ ಮಾಡಿರುವ ದಾಳಿಯಾಗಿದೆ. ಬಿಜೆಪಿಯಲ್ಲಿ ಇರುವ ಎಲ್ಲರೂ ಸತ್ಯ ಹರಿಶ್ಚಂದ್ರರಾ? ಅವರ್ಯಾರು ಭ್ರಷ್ಟಾಚಾರ, ಅಕ್ರಮ ಹಣ ಸಂಪಾದನೆಯನ್ನೇ ಮಾಡಿಲ್ವಾ ಎಂದು ಪ್ರಶ್ನಿಸಿದರು.
PublicNext
06/10/2020 05:04 pm