ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದಲ್ಲಿ ಜಿಡಿಪಿ ಬೆಳವಣಿಗೆ ದರ 'ಚೇತರಿಕೆ' ಕಂಡಿಲ್ಲ: ಕೇಂದ್ರವನ್ನ ಕುಟುಕಿದ ಚಿದಂಬರಂ

ನವದೆಹಲಿ: ದೇಶದ ಬೆಳವಣಿಗೆ ದರ ದುರ್ಬಲಗೊಳ್ಳುತ್ತಿದ್ದು, ಚೇತರಿಕೆಯ ಯಾವುದೇ ಲಕ್ಷಣಗಳಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಬುಧವಾರ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್​​ ಮಾಡಿರುವ ಪಿ. ಚಿದಂಬರಂ ಅವರು, '2021-22ರಲ್ಲಿ 20.1, 8.4, 5.4 ಮತ್ತು 4.1ರಷ್ಟು ತ್ರೈಮಾಸಿಕ ಬೆಳವಣಿಗೆ ದರಗಳು ಅತ್ಯಂತ ಗಮನಾರ್ಹವಾದ ಗ್ರಾಫ್ ಆಗಿದೆ. ಆ ಗ್ರಾಫ್ ಎಲ್ಲವನ್ನೂ ಹೇಳುತ್ತದೆ. ಪ್ರತಿ ತ್ರೈಮಾಸಿಕದಲ್ಲಿ ಬೆಳವಣಿಗೆ ದರ ದುರ್ಬಲಗೊಳ್ಳುತ್ತಿದೆ ಮತ್ತು ಚೇತರಿಕೆಯ ಯಾವುದೇ ಲಕ್ಷಣಗಳಿಲ್ಲ' ಎಂದು ಪ್ರತಿಪಾದಿಸಿದ್ದಾರೆ.

2021-22ರಲ್ಲಿನ ಜಿಡಿಪಿಯು 2019-20ರಲ್ಲಿ ಸಾಧಿಸಿದ ಮಟ್ಟಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಅಂದರೆ ನಿಮ್ಮ ಎರಡು ವರ್ಷಗಳ ಅವಧಿಯಲ್ಲಿ, ಭಾರತದ ಆರ್ಥಿಕತೆಯು 31-3-2020 ರಂದು ಇದ್ದ ಅದೇ ಮಟ್ಟದಲ್ಲಿದೆ. ಕೊನೆಯ ತ್ರೈಮಾಸಿಕವು ಶೇ.4.1 ರ ಬೆಳವಣಿಗೆಯ ದರವನ್ನು ತೋರಿಸುತ್ತಿದೆ ಎಂದಿದ್ದಾರೆ.

Edited By : Vijay Kumar
PublicNext

PublicNext

01/06/2022 03:23 pm

Cinque Terre

44.46 K

Cinque Terre

2

ಸಂಬಂಧಿತ ಸುದ್ದಿ