ನವದೆಹಲಿ: ಮೊದಲೇ ಪೆಟ್ರೋಲ್ ದರ ಏರಿದೆ. ಡೀಸೆಲ್ ದರ ಏನೂ ಕಡಿಮೆ ಇಲ್ಲ ಬಿಡಿ. ಈ ಹೊರೆ ತಗ್ಗಿಸಲು ಎಲೆಕ್ಟ್ರಿಕ್ ವಾಹನ ಪಡೆದರೆ, ಇದರ ಕಥೆ ಬೇರೆನೆ ಇದೆ. ನಿಲ್ಲಿಸಿದಲ್ಲಿಯೇ ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇದನ್ನ ಗಮನಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ತಯಾರಕ ಕಂಪನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಕೂಡ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಆದರೆ, ಕಳೆದ 10 ದಿನಗಳ ಹಿಂದೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ಟ್ರಕ್ ನಲ್ಲಿ ಸಾಗಿಸುತ್ತಿದ್ದ 20 ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದು ಹೋಗಿವೆ. ಜಿತೇಂದ್ರ ಇವಿ ಕಂಪನಿಗೆ ಸೇರಿದ್ದ ಸ್ಕೂಟರ್ ಇವಾಗಿದ್ದವು. ಇನ್ನು ಮಹಾರಾಷ್ಟ್ರದ ಓಲಾ ಕಂಪನಿ ಸೇರಿದ್ದ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದು ಹೋಗಿದೆ.
ಇಷ್ಟೇ ಅಲ್ಲದೇ, ಕೆಲವು ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿದ್ದರಿಂದ ಗಾಯೊಂಡಿದ್ದಾರೆ. ಕೆಲವರ ಪ್ರಾಣ ಹಾನಿನೂ ಆಗಿದೆ. ಅಂತಲೇ ನಿತಿನ್ ಖಡ್ಕರಿ ಟ್ವಿಟರ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಕೂಟರ್ ತಯಾರಕ ಕಂಪನಿಗಳಿಗೂ ಖಡಕ್ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
PublicNext
22/04/2022 08:40 am